ಕೇಂದ್ರ ಬಜೆಟ್ ಮಂಡನೆಯಾದ ಮೇಲೆ ಚಿನ್ನ ಬೆಳ್ಳಿಯ ಬೆಲೆಯಲ್ಲಿ ಕೊಂಚ ಬೆಲೆ ಕಡಿಮೆಯಾಗಲಿದೆ ಎಂದೇ ಹೇಳಲಾಗಿತ್ತು. ಬಜೆಟ್ ಮಂಡನೆಯಾದ ಮೇಲೆ ಕಡಿಮೆ ಕೂಡ ಆಗಿತ್ತು. ಆದರೆ ಸ್ವಲ್ಪ ದಿನದಲ್ಲೇ ಅಂದರೆ ಒಂದೇ ತಿಂಗಳಲ್ಲಿ ಬೆಲೆ ಏರಿಕೆ ಮಾಡಿಕೊಂಡ ಚಿನ್ನ ಬೆಳ್ಳಿ, ಮತ್ತೆ ಇಳಿಕೆಯಾಗದೆ ಏರುತ್ತಲೆ ಇದೆ. ಇದು ಚಿನ್ನ ಪ್ರಿಯ ಹೆಣ್ಣು ಮಕ್ಕಳಿಗೆ ಬಹಳ ನೋವಿನ ಸಂಗತಿಯಾಗಿದೆ. ಇಂದು ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.
ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಇಳಿಕೆಯಾಗಿದೆ. ಚಿನ್ನದ ಬೆಲೆ ಭಾರತದಲ್ಲಿ ಗ್ರಾಂಗೆ 20 ರೂಪಾಯಿ ಇಳಿಕೆಯಾಗಿದೆ. ಈಗ ಸದ್ಯ 10 ಗ್ರಾಂ ಚಿನ್ನದ ಬೆಲೆ 22 ಕ್ಯಾರೆಟ್ ಗೆ 71 ಸಾವಿರ ರೂಪಾಯಿ ಆಗಿದೆ. 24 ಕ್ಯಾರೆಟ್ ನ ಅಪರಂಜಿ ಚಿನ್ನದ ಬೆಲೆ 77,450 ರೂಪಾಯಿ ತಲುಪಿದೆ. ಹಾಗೇ 100 ಗ್ರಾಂ ಬೆಳ್ಳಿ ಬೆಲೆ 9,690 ರೂಪಾಯಿ ಇದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಲ್ಲೆಲ್ಲಿ ಎಷ್ಟಿದೆ ಎಂಬ ಕಂಪ್ಲೀಟ್ ಡಿಟೈಲ್ ಇಲ್ಲಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 71 ಸಾವಿರ ರೂಪಾಯಿ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 77,450 ರೂಪಾಯಿ ಇದೆ. ಬೆಳ್ಳಿ ಬೆಲೆ 10 ಗ್ರಾಂಗೆ 920 ರೂಪಾಯಿ ಆಗಿದೆ. ಚೆನ್ನೈನಲ್ಲಿ 71 ಸಾವಿರ, ಮುಂಬೈನಲ್ಲಿ 71 ಸಾವಿರ, ದೆಹಲಿಯಲ್ಲೂ 71 ಸಾವಿರವೇ ಇದ್ದು, ಕೋಲ್ಕತ್ತಾ, ಕೇರಳದಲ್ಲೂ ಒಂದೇ ಬೆಲೆ ಇದೆ. ಬೆಳ್ಳಿ ಬೆಲೆಯಲ್ಲಿ ಮಾತ್ರ ಒಂದೊಂದು ನಗರದಲ್ಲಿ ಕೊಂಚ ಏರಿಕೆ ಇಳಿಕೆ ಬೆಲೆಯಲ್ಲಿ ಲಭ್ಯವಿದೆ.