ಚಿತ್ರದುರ್ಗ, (ಜ.29) : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೀದರ್ ನ ಹುಮನಾಬಾದ್ ತಾಲೂಕಿನ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ್ ಮೇಲಿನ ಹಲ್ಲೆ ಖಂಡಿಸಿ ಮೌನ ಮೆರವಣಿಗೆಯ ಮೂಲಕ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ನೌಕರರನ್ನು ರಕ್ಷಿಸುವ ಕಾನೂನನ್ನು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ವೀರೇಶ್ ಉಪಾಧ್ಯಕ್ಷ ರಾಘವೇಂದ್ರ ಸುಧಾ, ರಾಜೇಂದ್ರ, ವೀರಣ್ಣ, ನರಸಿಂಹ ರೆಡ್ಡಿ, ಕೆಟಿ ತಿಮ್ಮಾರೆಡ್ಡಿ, ಮುರಳಿದರ, ಪ್ರಕಾಶ್, ಗಂಗಾಧರ್, ಶಶಿಧರ್, ಕಾಂತರಾಜ್ ಗುರುಮೂರ್ತಿ, ಶಿಕ್ಷಣ ಇಲಾಖೆಯ ಮಹಾಂತೇಶ, ಕೃಷ್ಣಪ್ಪ, ಬಿಕೆ ಹನುಮಂತಪ್ಪ, ತಿಮ್ಮಣ್ಣ ವಡಕಲ್, ಚನ್ನಕೇಶವ, ಹನುಮಂತಪ್ಪ, ರಾಜಪ್ಪ,
ಗ್ರಾಮ ಲೆಕ್ಕ ಸಹಾಯಕರ ಸಂಘದ ಅಧ್ಯಕ್ಷರಾದ ಮಾಲ್ತೇಶ್ ಮುದ್ದಜ್ಜಿ, ಸಮಾಜ ಕಲ್ಯಾಣ ಇಲಾಖೆಯ ನಿಲಯಪಾಲಕರ ಸಂಘದ ಉಪಾಧ್ಯಕ್ಷರಾದ ದೇವರಾಜ್, ಬಸವರಾಜ್, ರಮೇಶ್, ಪ್ರಕಾಶ್, ಹಾಗೂ ವಿವಿಧ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಉಪಸ್ಥಿತರಿದ್ದರು.