ಬೆಂಗಳೂರು: ಕಾಂಗ್ರೆಸ್ ನಲ್ಲಿ ಕುರ್ಚಿ ಕದನ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈಗ ಕಾಂಗ್ರೆಸ್ ನಲ್ಲಿ ಬದಲಾವಣೆಯ ಬಿರುಗಾಳಿ ತಣ್ಣಗಾವಿದ್ರೆ, ಆ ಕಡೆ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಸದ್ದು ಕೂಡ ಜೋರಾಗಿದೆ. ಕಳೆದ ಕೆಲವು ತಿಂಗಳಿನಿಂದ ಬಿಜೆಪಿಯಲ್ಲೂ ರೆಬೆಲ್ ತಂಡ ಒಂದಾಗಿದೆ. ಅದರಲ್ಲೂ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಒತ್ತಡಗಳು ಕೇಳಿ ಬರುತ್ತಿವೆ. ಇದೀಗ ಇದರ ನಡುವೆ ರೆಬೆಲ್ ಟೀಂ ದೆಹಲಿಗೆ ಪ್ರಯಾಣ ಬೆಳೆಸಿದೆ.
ದೆಹಲಿಗೆ ಭೇಟಿ ಕೊಟ್ಟಿರುವ ರೆಬೆಲ್ಸ್ ಟೀಂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರನ್ನು ಭೇಟಿ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ರೆಬೆಲ್ಸ್ ತಂಡ ದೆಹಲಿಗೆ ತೆರಳಿತ್ತು. ಬಿವೈ ವಿಜಯೇಂದ್ರ ವಿರುದ್ಧ ಸೆಡ್ಡು ಹೊಡೆದಿರುವ ಟೀಂ, ಕೇಂದ್ರ ಸಚಿವ ಕುಮಾರಸ್ವಾಮಿ, ಸಚಿವ ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಡಾ.ಸುಧಾಕರ್ ಸೇರಿ ಹಲವರನ್ನು ಭೇಟಿ ಮಾಡಿದ್ದಾರೆ.
ರಾಜ್ಯದಲ್ಲಿ ಸಮರ್ಪಕವಾಗಿ ಹೋರಾಟ ಮಾಡ್ತಿಲ್ಲ. ಸರ್ಕಾರದ ವಿರುದ್ಧ ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಹೋರಾಟದ ರೂಪುರೇಷೆ ರಚಿಸುವಲ್ಲಿ ಸಂಘಟನಾತ್ಮಕವಾಗಿ ವಿಫಲರಾಗಿದ್ದಾರೆ ಎಂಬೆಲ್ಲಾ ವಿಚಾರಗಳ ಮೇಲೆ ರೆಬೆಲ್ಸ್ ಟೀಂ ದೂರು ನೀಡಿದೆ. ಇಷ್ಟೆಲ್ಲಾ ಪುತ್ರನ ವಿರುದ್ಧ ಮಸಲತ್ತು ನಡೆಯುತ್ತಿರುವಾಗ ಯಡಿಯೂರಪ್ಪ ಅವರು ಸುಮ್ಮನೆ ಕೂರುವುದುಂಟಾ..? ಈಗ ದೆಹಲಿಗೆ ಹಾರಿದ್ದು, ಹೈಕಮಾಂಡ್ ನಾಯಕರ ಜೊತೆಗೆ ಪುತ್ರ ಪರ ಮಾತನಾಡುವ ಸಾಧ್ಯತೆ ಇದೆ. ಹೈಕಮಾಂಡ್ ನಾಯಕರು ಸಹ ರೆಬೆಲ್ಸ್ ಟೀಂ ಮಾತು ಕೇಲಕ್ತಾರಾ..? ಯಡಿಯೂರಪ್ಪ ಅವರ ಮಾತು ಕೇಳ್ತಾರಾ ನೋಡಬೇಕಿದೆ.
