ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಫೆ.02) : ಸುವರ್ಣ ಕ್ರಿಕೆಟ್ ಕ್ಲಬ್ ಚಿತ್ರದುರ್ಗ ವತಿಯಿಂದ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ದಿವಂಗತ ಎ.ರಾಜಗೋಪಾಲಚಾರ್ ಜ್ಞಾಪಕಾರ್ಥವಾಗಿ ಗುರುವಾರದಿಂದ ಅರಂಭಗೊಂಡಿರುವ ಎ.ರಾಜಗೋಪಾಲಚಾರ್ ಮೆಮೋರಿಯಲ್ ಕಪ್ ಲೀಗ್ ಕಮ್ ನಾಕೌಟ್ ಪಂದ್ಯಾವಳಿಯನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿದರು.
ಪಂದ್ಯ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪ್ರಥಮ ಬಾರಿಗೆ ಎ.ರಾಜಗೋಪಾಲಚಾರ್ ಜ್ಞಾನಪಕಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಯಾವುದೇ ಕ್ರೀಡೆಯನ್ನಾಗಲಿ ಸೋಲು-ಗೆಲುವು ಎನ್ನುವುದಕ್ಕಿಂತ ಮಿಗಿಲಾಗಿ ಕ್ರೀಡಾ ಮನೋಭಾವದಿಂದ ಆಡಬೇಕು ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್, ಎ.ರಾಜಗೋಪಾಲಚಾರ್‍ರವರ ಪುತ್ರ ಆರ್.ಮಂಜುನಾಥ್, ಸುವರ್ಣ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಎಂ.ಶಂಕರಮೂರ್ತಿ, ಉಪಾಧ್ಯಕ್ಷ ಟಿ.ನಟರಾಜ್, ರಾಘವೇಂದ್ರ, ವಿಜಯಕುಮಾರ್, ಚಿದಾನಂದ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.