ಬೆಂಗಳೂರು: ಬಿಟ್ ಕಾಯಿನ್ ಕೇಸ್ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಇದೇ ವಿಚಾರದಲ್ಲಿ ಆರೋಪ – ಪ್ರತ್ಯಾರೋಪ ಮಾಡುತ್ತಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಮೊದಲಿನಿಂದಲೂ ಸಿಎಂ ಮೇಲೆ ನೇರ ಹೊಣೆ ಹೊರೆಸುತ್ತಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಈಗ ಟ್ವಿಟ್ಟರ್ ನಲ್ಲಿ ಬೇರೆಯದ್ದೇ ವಿಚಾರ ತಿಳಿಸಿದ್ದಾರೆ. ಇದರಿಂದ ಬಿಟ್ ಕಾಯಿನ್ ಹಗರಣ ಹೊಸ ತಿರುವು ಪಡೆದುಕೊಂಡಿದೆ.
Press release from Office of Police Commissioner on 13/11/21 states they have written to Interpol on 28/4/21 seeking their help for Crime No. 03/2020 in #Bitcoin case.
Do they need help for a case of cheating of ₹ 23,000? Why is there no gist of complaint?
What is Govt hiding? pic.twitter.com/3ms26wGSwR— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 16, 2021
ಹಗರಣ ಸಂಬಂಧ ಇಂಟರ್ ಪೋಲ್ ಸಹಾಯ ಕೇಳಿ ಬೆಂಗಳೂರು ಪೊಲೀಸ್ ಆಯುಕ್ತರು ಬರೆದಿದ್ದ ಪತ್ರವನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಹಿರಂಗ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ವರ್ಷದ ಏಪ್ರಿಲ್ 28ರಂದೇ ಇಂಟರ್ ಪೋಲ್ ಸಹಾಯ ಕೇಳಿ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ನವೆಂಬರ್ 13 ರಂದು ಪ್ರಕಟಣೆ ಹೊರಡಿಸಿದ್ದರು.
ಆ ಪ್ರಕಟಣೆಯನ್ನು ಈ ಸಂಬಂಧ ಉಲ್ಲೇಖಿಸಿದ್ದಾರೆ. 23 ಸಾವಿರ ಕೋಟಿ ವಂಚನೆ ಪ್ರಕರಣ ತನಿಖೆಗೆ ಇಂಟರ್ ಪೋಲ್ ಸಹಾಯ ಅಗತ್ಯವಿತ್ತೇ ? ದೂರಿನ ಸಾರಾಂಶ ಉಲ್ಲೇಖ ಮಾಡಿಲ್ಲವೇಕೆ ? ಸರ್ಕಾರ ಸತ್ಯವನ್ನು ಮುಚ್ಚಿಡುತ್ತಿರುವುದೇಕೆ ಎಂದು ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.