Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚೈತ್ರಾ ಕುಂದಾಪುರ ಕೇಸಲ್ಲಿ ಹೊಸ ಟ್ವಿಸ್ಟ್ : ಸತ್ಯ ಒಪ್ಪಿಕೊಂಡ ಆರೋಪಿಗಳು ಹೇಳಿದ್ದೇನು..?

Facebook
Twitter
Telegram
WhatsApp

 

 

ಬೆಂಗಳೂರು: ಉದ್ಯಮಿಗೆ ಮೋಸ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಈಗ ಸಿಸಿಬಿ ವಶದಲ್ಲಿದ್ದಾಳೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಸದ್ಯ ಆರೋಪಿಗಳು ಹಣ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಅದು ಐದು ಕೋಟಿ ಅಲ್ಲ ಮೂರು ಕೋಟಿ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಪ್ರಕರಣದ ಏಳನೇ ಆರೋಪಿಯಾಗಿರುವ ಶ್ರೀಕಾಂತ್ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಗೋವಿಂದ ಬಾಬು ಅವರಿಂದ ನಾನೇ ಹಣ ತೆಗೆದುಕೊಂಡು, ಚೈತ್ರಾ ಹಾಗೂ ಗಗನ್ ಗೆ ನೀಡಿದ್ದೇನೆ. ಆದರೆ ಆ ಹಣ ಬಳಿಕ ಏನಾಯಿತು ಎಂಬುದು ಗೊತ್ತಿಲ್ಲ ಎಂದೇ ಗ್ಯಾಂಗ್ ಹೇಳುತ್ತಿದೆಯಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನ ಆರೋಪಿಗಳು ಲಾಕ್ ಆಗಿದ್ದಾರೆ.

ಪೊಲೀಸರು ತನಿಖೆ ನಡೆಸುತ್ತಿದ್ದು, ವಿಚಾರಣೆಯನ್ನು ತೀವ್ರವಾಗಿ ನಡೆಸುತ್ತಿದ್ದಾರೆ. ಇದೀಗ ಆರೋಪಿಗಳ ಮೊಬೈಲ್ ಗಳನ್ನು ರಿಟ್ರೀವ್ ಮಾಡಲು ಎಫ್ಎಸ್ಎಲ್ ಗೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ, ಡಿಲೀಟ್ ಆದ ಮೆಸೇಜ್ ಗಳು ಸಿಕ್ಕ ಬಳಿಕ ಸತ್ಯ ತಿಳಿಯಲಿದೆ.

ಗೋವಿಂದ ಬಾಬು ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡುವುದಾಗಿ ಚೈತ್ರಾ ಐದು ಕೋಟಿ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ ಈಗ ಚೈತ್ರಾ ಗ್ಯಾಂಗ್ ಮೂರು ಕೋಟಿ ತೆಗೆದುಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿಯ ಹೆಸರು ಬೇರೆ ಕೇಳಿ ಬಂದಿದೆ. ಅದರ ಜೊತೆಗೆ ಗೋವಿಂದ ಬಾಬುಗೆ ಇಂದಿರಾ ಕ್ಯಾಂಟೀನ್ ಕಾಂಟ್ಯಾಕ್ಟ್ ಹಣ ಬರಬೇಕು, ಅದಕ್ಕೆ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಚೈತ್ರಾಳೆ ಹೇಳಿದ್ದಳು. ಆದರೆ ಗೋವಿಂದ ಬಾಬು ಇದನ್ನು ತಳ್ಳಿ ಹಾಕಿದ್ದಾರೆ. ಇದಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊಸದುರ್ಗ | ಕೃಷಿ‌ ಮಾರುಕಟ್ಟೆಯಲ್ಲಿ ಡಿ. ಗ್ರೂಪ್ ನೌಕರ ಆತ್ಮಹತ್ಯೆ..!

ಹೊಸದುರ್ಗ: ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ. 55 ವರ್ಷದ ಜಗದೀಶ್ ಆತ್ಮಹತ್ಯೆಗೆ

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಸೂಗೂರುನಲ್ಲಿ ಹೆಚ್ಚು ಮಳೆ

  ಚಿತ್ರದುರ್ಗ,ಮೇ.20 : ಭಾನುವಾರ ಸುರಿದ ಮಳೆ ವಿವರದನ್ವಯ ಹಿರಿಯೂರು ತಾಲ್ಲೂಕಿನ ಸೂಗೂರುನಲ್ಲಿ 52.4ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 11.4 ಮಿ.ಮೀ, ಇಕ್ಕನೂರು 26 ಮಿ.ಮೀ,

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ : ಎಸ್ಐಟಿ ಮುಂದೆ ಹಾಜರಾಗುವುದು ಉತ್ತಮ ಎಂದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಇನ್ನು ಪತ್ತೆಯಾಗಿಲ್ಲ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿಗೆ ಪ್ರಶ್ನೆ ಎದುರಾದಾಗ, ಆರೋಪಿ ಆಗಿದ್ದವನು ಆರೋಪವನ್ನು ಎದುರಿಸಬೇಕು. ಕಾನೂನು ಹೋರಾಟವನ್ನು ಮಾಡಬೇಕು ಎಂದಿದ್ದಾರೆ.   ಆರೋಪವೆಂಬುದು

error: Content is protected !!