ಹಿಂದುತ್ವದ ಮೇಲೆಯೇ ನೆಲೆ ನಿಂತಿದ್ದ ಬಿಜೆಪಿಗೀಗ ಮುಸ್ಲಿಂ ಮತಗಳನ್ನು ಸೆಳೆಯುವ ಸವಾಲೊಂದು ದೊರಕಿದೆ. ಮುಸ್ಲಿಂ ಧರ್ಮದವ ವ್ಯಾಪಾರ ನಿಷೇಧ, ಧರ್ಮ ದಂಗಲ್, ಧ್ವನಿವರ್ಧಕ ಸೇರಿದಂತೆ ಹಲವು ವಿಚಾರಗಳಲ್ಲಿ ಕೆಲ ಬಿಜೆಪಿ ನಾಯಕರು ಮುಸ್ಲಿಂ ವಿರುದ್ಧವಾಗಿಯೇ ಮಾತನಾಡಿದ್ದರು. ಆದ್ರೆ ಇಉಗ ಹೈಕಮಾಂಡ್ ನಿಂದ ಬಿಜೆಪಿ ನಾಯಕರಿಗೆ ಹೊಸ ಸವಾಲೊಂದು ಎದುರಾಗಿದೆ.
ಈ ಬಾರಿ ಬಿಜೆಪಿ ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ನಾಯಕರು, ಮುಸ್ಲಿಂ ಮತಗಳನ್ನು ಸೆಳೆಯಲು ಪ್ಲ್ಯಾನ್ ರೂಪಿಸಿದ್ದಾರೆ. ಆದರೆ ಟಿಪ್ಪು ಸುಲ್ತಾನ್ ವರ್ಸಸ್ ಸಾವರ್ಕರ್ ಸೇರಿದಂತೆ ಹಲವು ಗಲಾಟೆಗಳು ನಡೆದಿವೆ. ಈ ಗಲಾಟೆಯ ನಡುವೆ ಮುಸ್ಲಿಂ ಮತಗಳನ್ನು ಬಿಜೆಪಿಗರು ಸೆಳೆಯುವುದು ಅಷ್ಟು ಸುಲಭದ ಮಾತಲ್ಲ. ಆದರೂ ಹೈಕಮಾಂಡ್ ನಿಂದ ಬಂದ ಸೂಚನೆಯಿಂದ ಇದೊಂದು ಸವಲಾಗಿದೆ.
ಮಾರ್ಚ್ 10ರಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 14 ರಾಜ್ಯಗಳಲ್ಲಿ 30% ಅಧಿಕ ಮುಸ್ಲಿಂ ಸಮುದಾಯವಿರುವ 64 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೈಕಮಾಂಡ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಆದ್ರೆ ಕರ್ನಾಟಕದಲ್ಲಿ ಬಿಜೆಪಿ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಿಲ್ಲ. ಬದಲಿಗೆ ಜಮ್ಮು ಕಾಶ್ಮೀರ, ದೆಹಲಿ, ಗೋವಾ, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ಆ ಕಡೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.