ಇತ್ತೀಚಿನ ಕೆಲ ವರ್ಷಗಳಲ್ಲಿ ಸಿಎಂ ಹೊಸ ಕಾರು ಖರೀದಿಸುವುದು, ಬಳಕೆ ಮಾಡುವುದು ಸಾಮಾನ್ಯವಾಗಿದೆ. ಈಗ ಶಿವಕುಮಾರ್ ಮನೆಗೆ ಬಂತು 2.8 ಕೋಟಿ ಬೆಲೆಯ ಲೆಕ್ಸಸ್ ಕಾರು ಬಂದಿದೆ. ಡಿಕೆ ಶಿವಕುಮಾರ್ ಬಳಿ ಹಲವು ಕಾರುಗಳಿವೆ. ಈ ಪಟ್ಟಿಗೆ ಮತ್ತೊಂದು ಹೊಸ ಕಾರು ಸೇರಿಕೊಂಡಿದೆ. ಈ ಬಾರಿ ಡಿಕೆ ಶಿವಕುಮಾರ್ ಬರೋಬ್ಬರಿ 2.8 ಕೋಟಿ ರೂಪಾಯಿ ಬೆಲೆಯ ಲೆಕ್ಸಸ್ LM 350h ಕಾರು ಖರೀದಿಸಿದ್ದಾರೆ.
ಡಿಕೆ ಶಿವಕುಮಾರ್ ಖರೀದಿಸಿದ ಲೆಕ್ಸಸ್ LM 350h ಕಾರಿನ ಬೆಲೆ 2.8 ಕೋಟಿ ರೂಪಾಯಿ. ಇದು 7 ಸೀಟಿನ ಕಾರಾಗಿದ್ದು,ಬಿಳಿ ಬಣ್ಣದ ಲೆಕ್ಸಸ್ LM 350h ಕಾರು ಇಂದು ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಮನೆಗೆ ಡೆಲಿವರಿಯಾಗಿದೆ. ಖರೀದಿಸಿದ ಲೆಕ್ಸಸ್ ಕಾರಿಗೆ KA 03 NZ 6666 ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ ಡಿ.ಕೆ.ಶಿ.
ಈ ಹಿಂದೆ ಕೆಲ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ಹೊಸ ಕಾರು ಖರೀದಿಸಿದ್ದಾರೆ. ಡಿಕೆ ಶಿವಕುಮಾರ್ ಐಷಾರಾಮಿ ಲೆಕ್ಸಸ್ ಕಾರು ಖರೀದಿಸಿದ ಹಿಂದೆ ಅಧಿಕಾರ ಬದಲಾವಣೆಯ ಸೂಚನೆ ಇದೆಯಾ ಅನ್ನೋ ಚರ್ಚೆಗಳು ಶುರುವಾಗಿದೆ.







