ಫೆಬ್ರುವರಿ 28, ಬಾನಂಗಳದಲ್ಲಿ ಅದ್ಭುತವೊಂದು ನಡೆಯಲಿದೆ. ಇಂದು ಸಾಯಂಕಾಲ ಆಕಾಶದಲ್ಲಿ ಮತ್ತೊಂದು ಅಪರೂಪದ ಮಹಾ ಅದ್ಭುತ ಅನಾವರಣಗೊಳ್ಳಲಿದೆ. ಇಂದು ಎಲ್ಲಾ ಗ್ರಹಗಳು ಆಕಾಶದಲ್ಲಿ ಒಟ್ಟಿಗೆ ಗೋಚರಿಸುತ್ತವೆ. 2040 ರವರೆಗೆ ಮತ್ತೆ ನಿರೀಕ್ಷಿಸಲಾಗದ ಅಪರೂಪದ ಆಕಾಶ ಘಟನೆ ಇದಾಗಿದೆ. ಬುಧ, ಶುಕ್ರ, ಗುರು, ಶನಿ ಮತ್ತು ಮಸುಕಾದ ಹೊರಗಿನ ಗ್ರಹಗಳು ಪಶ್ಚಿಮ ದಿಗಂತದಲ್ಲಿ ಇಂದು ಕಾಣಿಸಿಕೊಳ್ಳಲಿವೆ.
ಸೌರಮಂಡಲದ ಆರು ಪ್ರಮುಖ ಗ್ರಹಗಳು ಒಂದೇ ಸಾಲಿನಲ್ಲಿ ಬರುವ ‘ಪ್ಲಾನೆಟರಿ ಪರೇಡ್’ ಇಂದು ನಡೆಯಲಿದೆ.
ಖಗೋಳ ವಿಜ್ಞಾನಿಗಳ ಪ್ರಕಾರ, ಹೀಗೆ ಆರು ಗ್ರಹಗಳು ಒಂದೇ ಸರಳರೇಖೆಯಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪದ ಘಟನೆ. ಈ ದೃಶ್ಯವು ಆಕಾಶದಲ್ಲಿ ಒಂದು ಸುಂದರ ಮೆರವಣಿಗೆಯಂತೆ ಕಾಣಿಸಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಈ ಪ್ಲಾನೆಟರಿ ಪರೇಡ್‌ನಲ್ಲಿ ಗುರು (Jupiter), ಶುಕ್ರ (Venus), ಬುಧ (Mercury), ಶನಿ (Saturn), ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಪಾಲ್ಗೊಳ್ಳಲಿವೆ. ಈ ಆರು ಗ್ರಹಗಳು ಸೂರ್ಯನ ಸುತ್ತ ತಮ್ಮ ಕಕ್ಷೆಗಳಲ್ಲಿ ತಿರುಗುತ್ತಾ, ಭೂಮಿಯಿಂದ ನೋಡಿದಾಗ ಒಂದೇ ಸಮತಲಕ್ಕೆ ಬರುತ್ತವೆ.
ಸೂರ್ಯಾಸ್ತದ ತಕ್ಷಣವೇ, ಅಂದರೆ ಸಾಯಂಕಾಲ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಅದ್ಭುತವನ್ನು ಸ್ಪಷ್ಟವಾಗಿ ನೋಡಬಹುದು.ನೇರವಾಗಿ ಕಣ್ಣುಗಳಿಂದ ನೋಡಬಹುದು.ಆದರೆಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಭೂಮಿಯಿಂದ ಬಹಳ ದೂರ ಇರುವುದರಿಂದ, ಅವುಗಳನ್ನು ವೀಕ್ಷಿಸಲು ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಅತ್ಯಗತ್ಯ.



