ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : ಎಲ್ಲಾ ಜಾತಿ ಧರ್ಮದವರು ಸೌಹಾರ್ದತೆಯಿಂದ ಬದುಕುತ್ತಿರುವುದರಿಂದ ಭಾರತಕ್ಕೆ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಹೆಗ್ಗಳಿಕೆಯಿದೆ ಎಂದು ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.
ದಮ್ಮ ಸಾಂಸ್ಕೃತಿಕ ಕೇಂದ್ರ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ವತಿಯಿಂದ ಸ್ಟೇಡಿಯಂ ಸಮೀಪವಿರುವ ಬುದ್ದನ ಪ್ರತಿಮೆ ಮುಂಭಾಗದಿಂದ ಮಂಗಳವಾರ ಹೊರಟ ಸೌಹಾರ್ದ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಶಾಲಾ ಕಾಲೇಜುಗಳಲ್ಲಿ ವಾರಕ್ಕೊಂದು ದಿನವಾದರೂ ಸೌಹಾರ್ದ ಯಾತ್ರೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಶಾಂತಿ ಸೌಹಾರ್ದತೆಯ ಸಂದೇಶ ನೀಡಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹಿರಿಯರ ಇತಿಹಾಸಗಳನ್ನು ಯುವ ಪೀಳಿಗೆಗೆ ತಿಳಿಸಬೇಕೆಂದರು.
ದಮ್ಮ ಸಾಂಸ್ಕøತಿಕ ಕೇಂದ್ರದ ಆರ್.ವಿಶ್ವಸಾಗರ್ ಮಾತನಾಡಿ ಜಾತಿ ಧರ್ಮಗಳ ನಡುವೆ ಕೋಮು ಸೌಹಾರ್ದತೆ ಮೂಡಿಸುವ ಉದ್ದೇಶದಿಂದ ಹೊರಟಿರುವ ಸೌಹಾರ್ಧ ಯಾತ್ರೆ ಕಣಿವೆಮಾರಮ್ಮ ದೇವಸ್ಥಾನ, ಚರ್ಚ್, ಮಸೀದಿ, ಸೂಫಿ ಸಂತರ ಜಾಗಗಳಿಗೆ ತೆರಳಿ ದ್ವೇಷ ಭಾವನೆ ಮೂಡಿಸುವ ಬದಲು ಎಲ್ಲಾ ಜಾತಿ ಧರ್ಮದವರು ಸ್ನೇಹ ಸಹಭಾಳ್ವೆಯಿಂದ ಬದುಕುವ ಸಂದೇಶ ನೀಡುವುದು ಯಾತ್ರೆಯ ಉದ್ದೇಶ ಎಂದು ಹೇಳಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ನೆಲಮೂಲದ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಶಾಂತಿ ಸೌಹಾರ್ದತೆಯಿಂದ ಬದುಕುವ ವಾತಾವರಣ ಸೃಷ್ಠಿಯಾಗಬೇಕಿದೆ. ಅಸಮಾನತೆ, ಅಶಾಂತಿಯನ್ನು ಹೋಗಲಾಡಿಸಿ ಎಲ್ಲರೂ ಪ್ರೀತಿ ಸಹೋದರತ್ವದಿಂದ ಬದುಕುವಂತಾಗಬೇಕೆನ್ನುವುದು ನಮ್ಮ ಉದ್ದೇಶ. ಹಾಗಾಗಿ ಬುದ್ದ, ಶರಣರು, ಸಾಧು ಸಂತರ ವಿಚಾರಗಳನ್ನು ಎಲ್ಲೆಡೆ ಬಿತ್ತಬೇಕಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಸೌಹಾರ್ದ ಯಾತ್ರೆ ಸಂಚರಿಸಲಿದೆ ಎಂದರು.
ಅನ್ನಪೂರ್ಣಮ್ಮ ವಿಶ್ವಸಾಗರ್, ಬೀಬಿಜಾನ್, ನಾಗರತ್ನ, ಅರಣ್ಯಸಾಗರ್, ಫಾದರ್ ಅಲೆಕ್ಸಾಂಡರ್, ಚಂದ್ರಶೇಖರ್, ಮುರುಗನ್, ಅಬ್ದುಲ್ ರೆಹಮಾನ್, ದಾದಾಪೀರ್, ಡಾ.ರಹಮತ್‍ವುಲ್ಲಾ, ರಹಮಾನ್, ಬಾಬು ಎಂ.ಆರ್.ನಗರ, ತಸ್ಮಿಯ, ಸ್ಪೂರ್ತಿ, ಮಾರುತಿನಗರದ ರಿಹಾನ್, ತನ್ವೀರ್, ಶಾಹಿನಭಾನು, ಅಖಿಲಭಾನು, ಕಾನೂನು ವಿದ್ಯಾರ್ಥಿ ಅನಿಲ್, ಆಕಾಶ್ ಎಂ. ಮಂಜುನಾಥ್ ಡಿ. ಇನ್ನು ಮುಂತಾದವರು ಸೌಹಾರ್ದ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.