ಸುದ್ದಿಒನ್, ಹಿರಿಯೂರು, ಜೂನ್. 02 : ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದಿನ ಮಕ್ಕಳು ಮೊಬೈಲ್ ಗೀಳು ಬಿಟ್ಟು ಶಿಸ್ತಿನ ಸಿಪಾಯಿಯ ಶಿಕ್ಷಣ ಪಡೆದು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕು, ಶ್ರೀ ಹರೆ ಕೃಷ್ಣ ಪ್ರಚಾರಕರಾದ ಈಶ್ವರಪ್ಪ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗೊಲ್ಲ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ದೇವಾಲಯ ನೂತನ ನಿರ್ಮಾಣದ ಪಾದಪೂಜೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕುರಿತು ಮಾತನಾಡಿದರು.
ಶಿಕ್ಷಣದ ಜೊತೆಗೆ ಶ್ರೀಕೃಷ್ಣನ ತತ್ವಾದರ್ಶಗಳನ್ನು ಪಾಲಿಸುತ್ತಾ ಸಂಸ್ಕಾರ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಶ್ರೀ ಕೃಷ್ಣ ದೇವಸ್ಥಾನ ಸಮಿತಿಯ ನಿರಂಜನ್ ಮಾತನಾಡಿ ನಿಸ್ವಾರ್ಥ ಸೇವೆಯಿಂದ ಉನ್ನತ ಮಟ್ಟದ ಸಾಧನೆ ಸಾಧ್ಯ ವಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ ನಂತರ ಸಮಾಜಕ್ಕೆ ಕೊಡುಗೆ ಸಲ್ಲಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್. ಟಿ. ಮಂಜುನಾಥ್, ತಾಪಂ ಮಾಜಿ ಸದಸ್ಯ ಕೆ ಜಯರಾಮಯ್ಯ, ಪಿ ಎಸ್ ಪಾತಯ್ಯ, ಟಿ. ತಿಮ್ಮರಾಯಪ್ಪ, ಕರಿಯಾಲ ಗ್ರಾಮ ಅಧ್ಯಕ್ಷ ವೀರೇಶ್, ನಾಗೇಂದ್ರಪ್ಪ, ಪೂ. ಚಿತ್ತಪ್ಪ, ಪೂ. ಜಯರಾಮಣ್ಣ, ಶ್ರೀರಾಮಣ್ಣ, ಮಹಾಲಿಂಗಪ್ಪ, ಶಿವಣ್ಣ, ನಿರಂಜನ್, ಟಿ.ತಿಮ್ಮಣ್ಣ, ಚಿಕ್ಕಣ್ಣ, ಕರಿಯಣ್ಣ ರಾಮು, ಮಂಜುನಾಥ, ರಘು, ಭುವನೇಶ್, ಕುಮಾರ್, ಮಹೇಶ್, ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.
