ಚಿತ್ರದುರ್ಗ : ಇತ್ತೀಚೆಗೆ ನಗರದ ಸಂತ ಜೋಸೆಫರ ಕಾನ್ವೆಂಟ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು
ಕಾರ್ಯಕ್ರಮದಲ್ಲಿ 50 ವರ್ಷದಿಂದ ಸತತವಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಶ್ರೀಮತಿ ಪೌಲೀನ್ ಟೀಚರ್ ಅವರಿಗೆ ವಿಶೇಷವಾಗಿ ಸನ್ಮಾನವನ್ನು ಮುದ್ದುಮಕ್ಕಳ (ಕನ್ನಡ ಮಾಧ್ಯಮದ) ಬಳಗದಿಂದ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂತ ಜೋಸೆಫರ ಮುಖ್ಯ ಕಾರ್ಯಾಲಯ ಬೆಂಗಳೂರಿನಿಂದ ರೋಸ್ಲಿನ್ ಸಿಸ್ಟರ್, ಸಗಾಯಿ ಮೇರಿ ಸಿಸ್ಟರ್, ಮತ್ತು ಫಿಲೋಮಿನಾ ಸಿಸ್ಟರ್ ಗೌರವವನ್ನು ಸ್ವೀಕರಿಸಿದರು.
ಪ್ರಸ್ತುತ ಕನ್ನಡ ಮಾಧ್ಯಮದ ವ್ಯವಸ್ಥಾಪಕರು ಸಿಸ್ಟರ್ ಜೋಸೆಫೀನ್ ಮೇರಿ ಹಾಗೂ ಸಿಸ್ಟರ್ ಲೀನಸ್ ಇವರಿಗೆ ಗುರುವಂದನ ಗೌರವ ಸಮರ್ಪಣೆಯನ್ನು ನೆರವೇರಿಸಲಾಯಿತು. ಹಿರಿಯ ನಿವೃತ್ತ ಟೀಚರ್ ಗಳಾದ ಶ್ರೀಮತಿ ಕಾಣಿಕ್ಯ ಮೇರಿ ಟೀಚರ್, ಶ್ರೀಮತಿ ಚೂಡಾಮಣಿ ಟೀಚರ್, ಶ್ರೀಮತಿ ಸುಶೀಲಮ್ಮ ಟೀಚರ್ ಹಾಗು ಶ್ರೀಮತಿ ಲೀನಾ ಟೀಚರ್ ಗುರುವಂದನಾ ಗೌರವವನ್ನು ಪಡೆದರು.
ಹಳೆಯ ವಿದ್ಯಾರ್ಥಿಗಳಾದ ಜಗದೀಶ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಭರತ್ ಕುಮಾರ್, ಓ ಎಸ್ ಐ ಆಸ್ಟ್ರೇಲಿಯಾ.
ಡಾ. ಎಂ. ಎಚ್. ರಘುನಾಥರೆಡ್ಡಿ, ದಂತ ವಿಜ್ಞಾನ ಕಾಲೇಜು ಚಿತ್ರದುರ್ಗ,
ಡಾ.ಕುಮಾರಸ್ವಾಮಿ, ಕೈಗಾರಿಕಾ ರಸಾಯನಶಾಸ್ತ್ರ ವಿಭಾಗ ಜ್ಞಾನಗಂಗೋತ್ರಿ ಶಂಕರಘಟ್ಟ ಶಿವಮೊಗ್ಗ, ಡಾ ಅನುಪಮಾ, ರಾಮಯ್ಯ ಮೆಡಿಕಲ್ ಕಾಲೇಜು ಬೆಂಗಳೂರು, ಗೋವಿಂದ ಗುಡಿ A. G. M. ವಿಜಿಲೆನ್ಸ್, B. S. N. L.,ಹಾಗೂ ಶ್ರೀಮತಿ ಕಾವೇರಿ ಉಪನ್ಯಾಸಕರು, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ,ಇವರೆಲ್ಲರೂ ತಮ್ಮ ಗುರುಗಳಿಗೆ ವಂದಿಸಿ ತಮ್ಮ ಈ ಉನ್ನತ ಸ್ಥಾನಕ್ಕೆ ನಮ್ಮ ಈ ಅಚ್ಚುಮೆಚ್ಚಿನ ಗುರುಗಳೇ ಕಾರಣ, ಅವರ ಜ್ಞಾನಾರ್ಜನೆ ಹಾಗೂ ಮಾರ್ಗ ದರ್ಶನ ಮುಖ್ಯ ಕಾರಣ ಎಂದು ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಮೊದಲು ನಮ್ಮನ್ನು ಅಗಲಿದ ಶಿಕ್ಷಕ-ಶಿಕ್ಷಕಿಯರುಗಳನ್ನು
ನೆನೆದು ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ನಂತರ ಉದ್ಘಾಟನೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಹಾಗೂ ಗೌರವ ಸೂಚಕವಾಗಿ 50 ಕೆಜಿ ಕೇಕನ್ನು ಕತ್ತರಿಸಿ ನೆರೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಲಾಗಿತ್ತು.
ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ನಮಸ್ಕರಿಸಿ ಸೆಲ್ಫಿ ತೆಗೆದುಕೊಳ್ಳುವ ಹಾಗೂ ಕುದುರೆ ಕಳಸದ ರಥದಲ್ಲಿ ನೆಚ್ಚಿನ ಗುರುಗಳನ್ನು ಮೆರವಣಿಗೆ ಮುಖಾಂತರ ಶಾಲೆಗೆ ಕರೆತಂದಿದ್ದು ಹಾಗೂ ಡೊಳ್ಳು ಕುಣಿತ ಮಾಡುತ್ತಾ ವಿದ್ಯಾರ್ಥಿಗಳು ಗುರುಗಳೊಂದಿಗೆ ಹೆಜ್ಜೆ ಹಾಕಿದ್ದು ಶಾಲೆ ಆವರಣದಲ್ಲಿ ಮಿಂಚಿನ ಸಂಚಲನವನ್ನು ಮೂಡಿಸಿತು.
ಈ ಕಾರ್ಯಕ್ರಮವನ್ನು ಮುದ್ದುಮಕ್ಕಳ ಪರವಾಗಿ ಕಾರ್ಯಕ್ರಮದ ಕಾರ್ಯನಿರ್ವಾಹಕರಾಗಿ ಗಿರೀಶ್.ಯು.ಸಿ. ನಿರ್ದೇಶಕರು ರೆಡ್ ಕ್ರಾಸ್, ಸ್ವ್ಯಾನ್ ಪ್ರಿಂಟರ್ಸ್ ಶ್ರೀ ಕೃಷ್ಣಮೂರ್ತಿ (ಕಿಟ್ಟಿ),ಮಹಡಿ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ ಮೆಡಿಕಲ್ ಏಜೆನ್ಸಿ ಹಾಗೂ ಡಾ. ಬಸವರಾಜ ಹರ್ತಿ,ಪ್ರೊಫೆಸರ್ ಫಾರ್ಮಸಿ ಕಾಲೇಜ್, ರಾಘವೇಂದ್ರ ಗುಜ್ಜರ್ ಸಾಫ್ಟ್ ವೇರ್ ಇಂಜಿನಿಯರ್ , ಪ್ರದೀಪ್ ಪಿ, S. G. B. ಆಟೋ ವರ್ಕ್ಸ್, ಉದ್ಯಮಿಗಳಾದ ಕೃಷ್ಣ, ರಾಜೇಶ್, ರವಿ, ಕೆ ಮಂಜು, ಮಹಮದ್ ಮೌಸಿನ್, ವಕೀಲರಾದ ಶ್ರೀಮತಿ. ಮಂಜುಳಾ ಶಿವು ಹಾಗೂ ಬ್ಯೂಟಿಷಿಯನ್ ಶ್ರೀಮತಿ. ಗೀತಾ ಇನ್ನು ಮುಂತಾದವರು ವಹಿಸಿಕೊಂಡಿದ್ದರು.
ಮುದ್ದು ಮಕ್ಕಳ ಬಳಗವು ಶಾಲೆಗೆ ಜನರೇಟರ್ ಹಾಗೂ 10 ಬಡ ವಿದ್ಯಾರ್ಥಿಗಳಿಗೆ ಶುಲ್ಕ ಸಹಾಯ ಹಸ್ತ ಚಾಚುವುದರ ಮುಖಾಂತರ ನೆರೆದಿರುವ ಶಿಕ್ಷಕರ ಪ್ರೀತಿ ಪಾತ್ರರಾದರು. ಕಾರ್ಯಕ್ರಮದ ನಿರ್ವಹಣೆಯನ್ನು ಹಾಗೂ ವಂದನಾರ್ಪಣೆಯನ್ನು ಶ್ರೀಮತಿ. ವಿಜಯಕಲಾ, ರೇಡಿಯೋ ಉದ್ಘೋಷಕಿ, ಚಿತ್ರದುರ್ಗ ನೆರವೇರಿಸಿಕೊಟ್ಟರು. ಊಟದ ಜೊತೆ ನೀಡಿದ ವಿಶೇಷ ಸಿಹಿ ಮೈಸೂರುಪಾಕ್ ಮುದ್ದು ಮಕ್ಕಳ ಮನಸೂರೆಗೊಂಡಿತ್ತು.
ಪ್ರಾರ್ಥನೆಯನ್ನು ಶ್ರೀಮತಿ ಕೃಷ್ಣವೇಣಿ ಮತ್ತು ಗೆಳತಿಯರು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಸ್ಥಳೀಯವಾಗಿರುವ ಹಾಗೂ ರಾಷ್ಟ್ರ – ರಾಜ್ಯದ ಎಲ್ಲಾ ಭಾಗಗಳಲ್ಲಿ ಇರುವ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದೇಶಗಳಿಂದಲೂ ನಾಲ್ಕಾರು ಮಂದಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ಕಾರ್ಯಕ್ರಮವು ಮುದ್ದುಮಕ್ಕಳ ಸಮಕ್ಷಮದಲ್ಲಿ ಶಿಕ್ಷಕಿಯರ ಮನ ಸಂತೋಷ ಪಡುವಂತೆ ನಡೆದದ್ದು ವಿಶೇಷ.
ವರದಿ: ಡಾ॥ ಬಸವರಾಜು ಹರ್ತಿ