Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನೆರವೇರಿದ ಶಕ್ತಿ ದೇವತೆಗಳ ಸಂಗಮ ಹಾಗೂ ಉಡಿ ತುಂಬುವ ಕಾರ್ಯಕ್ರಮ

Facebook
Twitter
Telegram
WhatsApp

ಚಿತ್ರದುರ್ಗ : ಕಳೆದ ಒಂಬತ್ತು ವರ್ಷಗಳಿಂದಲೂ ರಾಜ್ಯದ ಜನ ನನ್ನನ್ನು ಮನೆ ಮಗನಂತೆ ಬೆಳೆಸುತ್ತಿದ್ದೀರಿ. ನಿಮ್ಮಗಳ ಋಣ ತೀರಿಸಲು ಆಗುವುದಿಲ್ಲ ಎಂದು ಜಿ.ಟಿವಿ ಖ್ಯಾತಿಯ ಆನಂದ್‍ಗುರೂಜಿ ಹೇಳಿದರು.

 

ಜಿ.ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಪೌಂಡೇಶನ್ ಭೀಮಸಮುದ್ರ ಹಾಗೂ ಜಿ.ಎಸ್.ಅನಿತ್‍ಕುಮಾರ್ ಅಭಿಮಾನಿಗಳ ಬಳಗ ಚಿತ್ರದುರ್ಗ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ನಗರದ ಶಕ್ತಿದೇವತೆಗಳ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದರು.

ಎರಡು ಕಾರ್ಯಕ್ರಮಗಳನ್ನು ಮುಗಿಸಿ ಇಲ್ಲಿಗೆ ಬರುವುದು ತಡವಾಯಿತು. ಆದರೂ ವೇದಿಕೆ ಮೇಲಿದ್ದ ಶರಣರೆಲ್ಲಾ ನನ್ನ ಮೇಲೆ ಮುನಿಸಿಕೊಳ್ಳದೇ ಮಾತೃ ಹೃದಯದಿಂದ ಬರಮಾಡಿಕೊಂಡಿದ್ದು, ನನಗೆ ಅತೀವ ಸಂತಸವನ್ನುಂಟು ಮಾಡಿತು.

ಭೀಮಸಮುದ್ರದ ಜಿ.ಎಸ್.ಅನಿತ್‍ಕುಮಾರ್ ಶಕ್ತಿದೇವತೆಗಳ ಸಂಗಮದಲ್ಲಿ ಉಡಿ ತುಂಬುವ ಕಾರ್ಯ ನೆರವೇರಿಸಿರುವುದು ಅತ್ಯಂತ ಪುಣ್ಯ ಪವಿತ್ರವಾದುದು. ಉತ್ತರ ಕರ್ನಾಟಕ ತಾಯಂದಿರು ರೊಟ್ಟಿ ಬಡಿಯುವುದಕ್ಕಷ್ಟೆ ಗಟ್ಟಿಗರಲ್ಲ. ಒನಕೆ ಓಬವ್ವನಂತೆ ಶತ್ರುಗಳನ್ನು ಸದೆಬಡಿಯುವಲ್ಲಿಯೂ ಗಟ್ಟಿಗಿತ್ತಿಯರು ಎಂದರು.

ಪ್ರತಿನಿತ್ಯವೂ ಝೀ ಟಿ.ವಿ.ಯಲ್ಲಿ ಜೀವನದ ಮೌಲ್ಯಗಳನ್ನು ತಿಳಿಸುತ್ತ ಸಂಸ್ಕಾರದ ಸಂದೇಶಗಳನ್ನು ನೀಡುವುದನ್ನು ನೀವುಗಳೆಲ್ಲಾ ಕೇಳುತ್ತಿದ್ದೀರಿ. ನಿಮ್ಮೆಲ್ಲರ ಕಷ್ಠ-ಸುಖ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಒಂದು ಮನೆ ಕುಟುಂಬ ಸುಂದರವಾಗಿದ್ದು, ಸದಾ ನಗು ತುಂಬಿರಬೇಕೆಂದರೆ ತಾಯಂದಿರ ಪಾತ್ರ ಬಹಳ ಮುಖ್ಯ ಎಂದು ಆನಂದ್ ಗುರೂಜಿ ತಿಳಿಸಿದರು.

ಬಸವಯಾದವಾನಂದಸ್ವಾಮಿ ಮಾತನಾಡಿ ಶಕ್ತಿ ದೇವತೆಗಳ ಆರಾಧನೆ ಪಾಳೆಯಗಾರರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈಗ ಭೀಮಸಮುದ್ರದ ಯುವ ಮುಖಂಡ ಜಿ.ಎಸ್.ಅನಿತ್‍ಕುಮಾರ್ ಶಕ್ತಿದೇವತೆಗಳ ಸಂಗಮದ ಮೂಲಕ ನಿಮಗೆಲ್ಲಾ ಆಶೀರ್ವಾದ ಸಿಗುವಂತೆ ಮಾಡಿದ್ದಾರೆ. ದೇವರನ್ನು ನೋಡುವುದು ಕಷ್ಟವಲ್ಲ. ಕಲಿಯುಗದಲ್ಲಿ ಯಾರು ನನ್ನನ್ನು ಸ್ಮರಣೆ ಮಾಡುತ್ತಾರೋ ಅವರಿಗೆ ಒಲಿಯುತ್ತೇನೆಂದು ಭಗವಂತ ವಾಣಿ ಹೇಳುತ್ತಾನೆ. ಈ ನಿಟ್ಟಿನಲ್ಲಿ ಜಿ.ಎಸ್.ಅನಿತ್‍ಕುಮಾರ್ ಶಕ್ತಿ ದೇವತೆಗಳ ಸಂಗಮದ ಮೂಲಕ ಮಹಿಳೆಯರಿಗೆ ಉಡಿ ತುಂಬುವ ಕೆಲಸ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ರಾಜಕೀಯವಾಗಿ ನೀವುಗಳು ಅವರಿಗೆ ಶಕ್ತಿ ತುಂಬಬೇಕು ಎಂದು ಹೇಳಿದರು.

ಗಂಗಾಧರೇಶ್ವರ ಮಠದ ಶಾಂತವೀರಸ್ವಾಮೀಜಿ ಮಾತನಾಡುತ್ತ ಋಷಿ ಮುನಿಗಳ ಕಾಲದಲ್ಲಿ ಶಕ್ತಿದೇವತೆಗಳ ಸಂಗಮವಾಗುತ್ತಿತ್ತು. 33 ಕೋಟಿ ದೇವಾನು ದೇವತೆಗಳಿದ್ದಾರೆ. ಸುಸಂಸ್ಕøತ ಕುಟುಂಬದಿಂದ ಬಂದಿರುವ ಜಿ.ಎಸ್.ಅನಿತ್‍ಕುಮಾರ್‍ರವರಿಗೆ ರಾಜಕೀಯದಲ್ಲಿ ಅಧಿಕಾರ ಒಲಿಯಲಿ ಎಂದು ಹಾರೈಸಿದರು.

ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡುತ್ತ ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಶಕ್ತಿ ದೇವತೆಗಳ ಸಂಗಮವಾಗುತ್ತಿರುವುದು ಕೂಡ ಒಂದು ಐತಿಹಾಸಿಕವೆ. ಬಡವ-ಸಿರಿವಂತ ಎನ್ನುವ ಭೇದಭಾವವಿಲ್ಲದೆ ಪ್ರತಿಯೊಬ್ಬರಿಗೂ ದೇವರ ಕೃಪೆ ಬೇಕು. ಸಂಕಟ ಬಂದಾಗ ದೇವರನ್ನು ಸ್ಮರಣೆ ಮಾಡುವ ಬದಲು ಸಕಲ ಸಂಪತ್ತು ಇದ್ದಾಗ ದೇವರನ್ನು ನೆನೆಯಬೇಕು. ಅದುವೇ ನಿಜವಾದ ಭಕ್ತಿ ಎಂದು ಹೇಳಿದರು.

ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡಿ ಜಿ.ಎಸ್.ಅನಿತ್‍ಕುಮಾರ್ ಶಕ್ತಿ ದೇವತೆಗಳ ಸಂಗಮ ಏರ್ಪಡಿಸಿ ನಿಮಗೆಲ್ಲಾ ನವದುರ್ಗಿಯರನ್ನು ಒಂದೇ ಕಡೆ ದರ್ಶನ ಮಾಡಿಸಿದ್ದಾರೆ. ಭಗವಂತ ಹಣ, ಐಶ್ವರ್ಯ, ಸಂಪತ್ತು ಕೊಡುತ್ತಾನೆ. ಆದರೆ ಭಗವಂತನಿಗೆ ನಾವೇನು ಕೊಟ್ಟಿದ್ದೇವೆನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜಿ.ಎಸ್.ಅನಿತ್‍ಕುಮಾರ್‍ರವರ ಕೊಡುಗೆ ಸೇವೆ ಅಪಾರ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ಆಶೀರ್ವಾದ ಅವರಿಗೆ ಸಿಗಬೇಕಿದೆ ಎಂದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭೀಮುಸಮುದ್ರ ಜಿ.ಎಸ್.ಅನಿತ್‍ಕುಮಾರ್, ಶ್ರೀಮತಿ ಸವಿತ ಜಿ.ಎಸ್.ಅನಿತ್‍ಕುಮಾರ್, ರತ್ನಮ್ಮ, ಚಂದ್ರಿಕಾ ಲೋಕನಾಥ್, ನಗರಸಭೆ ಮಾಜಿ ಸದಸ್ಯೆ ಶ್ಯಾಮಲ ಶಿವಪ್ರಕಾಶ್, ಜಿ.ಎಸ್.ಅನಿತ್‍ಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ನಂದಿ ನಾಗರಾಜ್, ನಗರಸಭೆ ಸದಸ್ಯೆ ಶಶಿ, ಶ್ರೀಮತಿ ರೀನಾ ವೀರಭದ್ರಪ್ಪ, ಶ್ರೀಮತಿ ಚಂದ್ರಿಕಾ ಲೋಕನಾಥ್ ಸೇರಿದಂತೆ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!