Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಕೃತಿ ಶಾಲೆಯಲ್ಲಿ ಅದ್ಧೂರಿ ಸ್ವಾತಂತ್ರೋತ್ಸವ  ದಿನಾಚರಣೆ

---Advertisement---

 

ಸುದ್ದಿಒನ್, ಚಿತ್ರದುರ್ಗ, (ಆ.15) : ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಅಧ್ಯಕ್ಷರಾದ ಎಂ. ಕೆ. ರವೀಂದ್ರರವರು ಧ್ವಜಾರೋಹಣವನ್ನು ನೆರವೇರಿಸಿದರು.ಒಂದರಿಂದ ನಾಲ್ಕನೇ ತರಗತಿಯ ಪುಟ್ಟ ಮಕ್ಕಳು ಪಥಸಂಚಲನ ಮಾಡುತ್ತಾ ಶಿಸ್ತಾಗಿ ಧ್ವಜವಂದನೆ ನಡೆಸಿದರು.

ಮಕ್ಕಳಿಂದ ಭಾಷಣ : ನಂತರ 4ನೇ ತರಗತಿಯ ವಿದ್ಯಾರ್ಥಿನಿಯರಾದ ಶ್ರೀನಿಧಿ, ದಿವ್ಯಶ್ರೀ, 2ನೇ ತರಗತಿಯ ಹಿತೇಶ್ ಟಿ. ಸಜ್ಜನ್, 6ನೇತರಗತಿಯ ವರುಣ್, 7ನೇ ತರಗತಿಯ ಸೈಯದ್ ಫರ್ಹಾನ್ ಭಾಷಣ ಮಾಡಿದರು. ನಂತರ ಶಿಕ್ಷಕಿಯಾದ ಕುಮಾರಿ ತೇಜಸ್ವಿನಿಯವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ರಾಜ್ಯಗಳು ಮತ್ತು ರಾಜಧಾನಿಗಳನ್ನು ಸುಲಲಿತವಾಗಿ 5, 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳು ಹೇಳಿ ನೆರೆದಿದ್ದ ಸರ್ವರನ್ನೂ ಬೆರಗುಗೊಳಿಸಿದರು.

ಮುಖ್ಯ ಅತಿಥಿಗಳ ನುಡಿ : ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕೆ. ನಾರಾಯಣ್ ರವರು ಮಾತನಾಡುತ್ತಾ, ಯಾರಾದರೂ ಸೇನೆಯನ್ನು ಸೇರಲು ಬಯಸುವವರಿದ್ದರೆ ತಾವು ಮಾರ್ಗದರ್ಶನವನ್ನು ಮಾಡುವುದಾಗಿ ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ : ನಂತರ ನರ್ಸರಿ ವಿದ್ಯಾರ್ಥಿಗಳಿಂದ ಛದ್ಮ ವೇಷಧರಿಸಿದ್ದರು.

ಓಜಸ್ ಆರ್ಯನ್ ಯೋಧನಾಗಿ, ಆರ್ಯನ್ ಅಂಬೇಡ್ಕರ್ ಆಗಿ, ಜೋಷಿತ್ ಭಗತ್ ಸಿಂಗ್, ಧನ್ಯತಾ ಆರ್ ಗುಂಡರಪಿ ಒನಕೆ ಓಬವ್ವ, ಉಜ್ವಲ್ ನೆಹರು, ಭೂಮಿಕ ಕಿತ್ತೂರು ರಾಣಿ ಚೆನ್ನಮ್ಮನಾಗಿ ಅಭಿನಯಿಸಿ ಎಲ್ಲರ ಮನಸೂರೆಗೊಂಡರು.

ವಿಶೇಷ ಆಹ್ವಾನಿತರ ನುಡಿ : ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಶ ರಾಜು ಪಿ.ಎಲ್. ಮಾತನಾಡುತ್ತಾ, ತಟ್ಟೆಯಲ್ಲಿ ಅನ್ನವನ್ನಿಟ್ಟರೆ ಸಾಲದು, ಅದನ್ನು ತಿಂದರೆ ಮಾತ್ರ ನಮ್ಮ ಹೊಟ್ಟೆ ತುಂಬುವುದೋ ಹಾಗೆ, ಪಾಠಗಳನ್ನು ಶಿಕ್ಷಕರು ಮಾಡಿದರಷ್ಟೇ ಸಾಲದು ವಿದ್ಯಾರ್ಥಿಗಳು ಓದಿ ಮನನ ಮಾಡಿಕೊಂಡರೆ ಉನ್ನತ ಹುದ್ದೆಗಳನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರಕೃತಿ ಪ್ರಯೋಗ ಶಾಲೆ ಉದ್ಘಾಟನೆ : ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಶ್ವಿನ್ ಕುಮಾರ್ ರವರು ಹಾಗೂ ಎಲ್ಲಾ ಗಣ್ಯರೊಡಗೂಡಿ  ಆಧುನಿಕವಾಗಿ ವಿನ್ಯಾಸಗೊಳಿಸಿರುವ ಪ್ರಕೃತಿ ಪ್ರಯೋಗ ಶಾಲೆಯನ್ನು ಹಾಗೂ ಕಂಪ್ಯೂಟರ್ ಲ್ಯಾಬ್ ಗಳನ್ನು ಉದ್ಘಾಟಿಸಿದರು.

ಪ್ರಶಸ್ತಿಪತ್ರ ವಿತರಣೆ : ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು  ಹಾಗೂ ಛದ್ಮ ವೇಷಧರಿಸಿದ್ದ ನರ್ಸರಿ ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.

ಅಧ್ಯಕ್ಷರ ನುಡಿ : ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡುತ್ತಾ ಎಂ.ಕೆ. ರವೀಂದ್ರ ರವರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆಯು ಬದ್ಧವಾಗಿದೆ ಎಂದು ತಿಳಿಸುತ್ತಾ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರಿದರು.

ವಂದನಾರ್ಪಣೆ : ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನೂ ಶಾಲೆಯ ಕಾರ್ಯದರ್ಶಿಯವರಾದ ಶ್ರೀ ಕಾರ್ತೀಕ್ ರವರು ಮಾತನಾಡುತ್ತಾ ಮಕ್ಕಳು ಅತಿ ಅಲ್ಪ ಸಮಯದಲ್ಲಿ ಇಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮಕ್ಕೆ ಸಹಕರಿಸಿದ ಪೋಷಕರುಗಳಿಗೂ, ವಿದ್ಯಾರ್ಥಿಗಳಿಗೂ ಹಾಗೂ ಅವರುಗಳನ್ನು ತಯಾರುಮಾಡಿದ ಶಿಕ್ಷಕರುಗಳಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ಹಾಗೂ ಆಗಮಿಸಿದ್ದ ಸರ್ವರಿಗೂ ವಂದನೆಗಳನ್ನು ಅರ್ಪಿಸಿದರು.

ಭಾಗವಹಿಸಿದ ಗಣ್ಯರು : ಈ ಕಾರ್ಯಕ್ರಮದಲ್ಲಿ ಶಾಲೆಯ ಉಪಾಧ್ಯಕ್ಷರಾದ ಉಮೇಶ್.ವಿ. ತುಪ್ಪದ  ಖಜಾಂಚಿಗಳಾದ ಶ್ರೀಮತಿ ಶ್ವೇತಾ ಕಾರ್ತಿಕ್ ಟ್ರಸ್ಟಿಗಳಾದ ಮಾರುತಿ ಮೋಹನ್,  ಡಾ|| ಮಧುಸುದನ್ ರೆಡ್ಡಿ,  ಹರೀಶ್, ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲ.ಎಂ.ಎಸ್ ಹಾಗು ಶಾಲೆಯ ಎಲ್ಲಾ ಶಿಕ್ಷಕರು ಪಾಲ್ಗೊಂಡಿದ್ದರು.

ಶಿಕ್ಷಕಿಯಾದ ಶ್ರೀಮತಿ ರೇಷ್ಮ ರವರು ಎಲ್ಲರನ್ನು ಸ್ವಾಗತಿಸಿದರು ಕುಮಾರಿ ರಮ್ಯಾ ಮತ್ತು ಶ್ರೀಮತಿ ಮಾನಸ ರವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಾಂಸ್ಕøತಿಕ ಕಾರ್ಯಕ್ರಮ : ನಂತರ  ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡಿತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment