ಸುದ್ದಿಒನ್, ಚಿತ್ರದುರ್ಗ: ಸಸ್ಪೆಂಡ್ ಮಾಡಿಸ್ತೀನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ಗ್ರಾಮ ಪಂಚಾಯತ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದಲ್ಲಿ ನಡೆದಿದೆ. ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿಟ್ಟ ಮಾಹಿತಿ ಪ್ರಕಾರ, ತಾಲೂಕು ಪಂಚಾಯತ್ ಇಓ ಮೂಲಕ ಒತ್ತಡ ಹಾಕಲಾಗಿತ್ತು. ಎಸ್ಸಿಗಳಿಗೆ ಮಾತ್ರ ಕೆಲಸ ಮಾಡಿಸಿಕೊಡಿ ಅಂತ ಪಿಡಿಒಗಳ ಮೂಲಕ ಒತ್ತಡ ಹಾಕುತ್ತಿದ್ದರು. ನಿನ್ನನ್ನು ಸಸ್ಪೆಂಡ್ ಮಾಡಿಸಿ ಬಿಡ್ತೀನಿ ಅಂತ ಶಾಸಕ ಚಂದ್ರಪ್ಪ ವಿನಾಕಾರಣ ಬೆದರಿಕೆ ಹಾಕುತ್ತಿದ್ದರು ಎಂದು ಉಪ್ಪರಿಗೇನಹಳ್ಳಿಯ ಮೋಹನ್ ಕುಮಾರ್, ಮೂರ್ತಿ, ಉಗ್ರಪ್ಪ, ರಾಜಪ್ಪ ಹಾಗೂ 30 ಜನ ಸ್ನೇಹಿತರ ಹೆಸರನ್ನೂ ಡೆತ್ ನೋಟ್ ನಲ್ಲಿ ಬರೆಯಲಾಗಿದೆ.
ಇದಷ್ಟೇ ಅಲ್ಲದೆ ಡೆತ್ ನೋಟ್ ನಲ್ಲಿ ಖಾತೆ ಮಾಡಿಸಿಕೊಡುವಂತೆ ಪೀಡಿಸುತ್ತಿದ್ದವರ ಹೆಸರನ್ನು ಜೊತೆಗೆ ಫೋನ್ ನಂಬರ್ ಅನ್ನು ಬರೆಯಲಾಗಿದೆ. ಪಂಚಾಯತ್ ಇಓ ಮೇಲೆ ತನಿಖೆಯಾಗಬೇಕೆಂದು ಸಹ ಒತ್ತಾಯಿಸಿದ್ದಾರೆ.