in ,

chitradurgachitradurga allowedallowed featuredfeatured

ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ ; ಚಿತ್ರದುರ್ಗದಲ್ಲಿ ಮೊಟ್ಟ ಮೊದಲ ಬಾರಿಗೆ  ಐಟಿ ಕಂಪನಿ ಆರಂಭ…!

suddione whatsapp group join

 

ಚಿತ್ರದುರ್ಗ(ಮಾ.03): ಚಿತ್ರದುರ್ಗದಲ್ಲಿ ಇದೇ ಮೊದಲ ಬಾರಿಗೆ ಐಟಿ ಹಾಗು ನಾನ್ ಐಟಿ  ಕಂಪನಿ ಆರಂಭಕ್ಕೆ ಸಕಲ ಸಿದ್ದತೆ ನಡೆಸಲಾಗಿದ್ದು, ಸ್ಟಾರ್ಟ್ ಅಪ್ IT  ಪ್ರೈವೆಟ್ ಲಿಮಿಟೆಡ್ ಕಂಪನಿ LANCIERE ಪ್ರೈವೆಟ್ ಲಿಮಿಟೆಡ್ ಕಂಪನಿ ಮತ್ತು ಫೈನಾನಿಸಿಯಲ್ ಸರ್ವಿಸ್ ಆರಂಭಿಸಲಿದ್ದೇವೆ ಎಂದು ಸಂಸ್ಥೆಯ HR Manager ಯಶ್ವಂತ್ ತಿಳಿಸಿದರು.

ಈ ಕುರಿತು ನಗರದ ಖಾಸಗಿ ಹೊಟೆಲ್
ಸಭಾಂಗಣದಲ್ಲಿ ಮಾತನಾಡಿದ ಅವರು,
ಕೋವಿಡ್ ಮಹಾಮಾರಿ ಸಂದರ್ಭದಲ್ಲಿ
ಉಂಟಾದ ಲಾಕ್ ಡೌನ್ ನಿಂದಾಗಿ ಸಾಕಷ್ಟು ಯುವಕ  ಯುವತಿಯರು ಕೆಲಸ ಕಳೆದುಕೊಂಡಿದ್ದಾರೆ.  ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಜನರು ತಮ್ಮ
ತಮ್ಮ ಊರುಗಳಿಗೆ ವಾಪಾಸಾಗಿದ್ದು,
ವ್ಯವಸಾಯ ಮಾಡುತ್ತಿದ್ದಾರೆ.

ಉದ್ಯೋಗಸ್ಥ ಮಹಿಳೆಯರು ನಾನಾ
ಕಾರಣಗಳಿಂದ ಕೆಲಸ ಬಿಟ್ಟು ಮನೆಯಲ್ಲೇ
ಇದ್ದಾರೆ. ಇದನ್ನು ಮನಗಂಡು ಮಾಜಿ
ಎಂಎಲ್‌ಸಿ ರಘು ಆಚಾರ್ ಅವರು
ಹೈದರಾಬಾದ್‌ನ ಐಟಿ ಕಂಪನಿಯಲ್ಲಿ ತಮ್ಮ
ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ
ಕೊಡುವ ಬಗ್ಗೆ ಚರ್ಚಿಸುತ್ತಿರುವಾಗ ಅದೇ
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ
ಅಚ್ಚರಿಯಾಯಿತು.

ನಾನು ಕೂಡ ಚಿತ್ರದುರ್ಗದವನೇ
ಆಗಿರುವುದರಿಂದ ಅವರ ಜೊತೆ ಚರ್ಚಿಸಿದ ನಂತರ ನಾನು ನಮ್ಮೂರಿಗೆ ವಾಪಾಸಾಗಿದ್ದು, ಚಿತ್ರದುರ್ಗದ ಸೂರ್ಯ ಲೇಔಟ್ ಸರ್ವೆ ನಂ 102/1/86 ಜಾಗದಲ್ಲಿ ದಿನಾಂಕ: 06/03/2023 ರ ಸೋಮವಾರದಂದು ಐಟಿ ಮತ್ತು ನಾನ್ ಐಟಿ ಕಂಪನಿಯ  ಶಂಕುಸ್ಥಾಪನೆ ನೆರವೇರಲಿದೆ ಎಂದರು.

ಕಳೆದ 7 ವರ್ಷಗಳಿಂದ ಹೈದರಾಬಾದ್‌ನ
ಮಾದಾಪುರದಲಿರುವ AIM ಮತ್ತು JRK ತರಬೇತಿ ಮತ್ತು ಪ್ಲೇಸ್ ಮೆಂಟ್ ಸಂಸ್ಥೆಗಳ ಮೂಲಕ ಅಭ್ಯರ್ಥಿಗಳಿಗೆ ತರಬೇತಿ ನೀಡಿದ ಬಳಿಕ ಕೆಯುಜಿಎಸ್ (KUGS) ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೆಟ್ ಲಿಮಿಟೆಡ್ ನ ಸಹಯೋಗದೊಂದಿಗೆ ಸಾಕಷ್ಟು ಯುವಕ ಯುವತಿಯರಿಗೆ ಉದ್ಯೋಗ ಒದಗಿಸಿ ಕೊಡಲಾಗಿದ್ದು,  ಇದೀಗ ಜಿ. ರಘು ಆಚಾರ್ ಅವರ ಆಶಯದಂತೆ ತಕ್ಷಣದಿಂದಲೇ  ಕೆಲಸದ ಅವಶ್ಯಕತೆ ಇರುವ ನಿರುದ್ಯೋಗಿಗಳಿಗೆ
ಎರಡು ವಾರಗಳ ತರಬೇತಿ ನೀಡಿ ಹೈದರಾಬಾದ್ ಮೂಲದ ಕಂಪನಿಗಳಲ್ಲಿ ವರ್ಕ್  ಫ್ರಂ ಹೋಂ  (ಮನೆಯಲ್ಲೇ ಕುಳಿತು ಕೆಲಸ ಮಾಡುವ) ಅವಕಾಶ ನೀಡಲಾಗುವುದು.
ಕೆಲಸ ಮಾಡಲು ಬೇಕಾದ ಲ್ಯಾಪ್‌ಟಾಪ್ ಹಾಗು ಇಂಟರ್ ನೆಟ್ ಸೌಲಭ್ಯಗಳನ್ನು ಕಂಪನಿಯಿಂದಲೇ ಕೊಡಲಾಗುತ್ತದೆ ಎಂದು
ತಿಳಿಸಿದರು.

ಆಸಕ್ತ ನಿರುದ್ಯೋಗಿಗಳು 8296675797
ಸಂಖ್ಯೆಗೆ ಕರೆ ಮಾಡಿ ಅಥವಾ
e-mail: aimtrainingandplacement@gmail.com ಮೂಲಕ ಸಂಪರ್ಕಿಸಲು
ಕೋರಲಾಗಿದೆ.

ಸುದ್ದಿಗೋಷ್ಠಿಯಲ್ಲಿ  LANCIERE  ಪ್ರೈವೆಟ್ ಲಿಮಿಟೆಡ್ ಕಂಪನಿ ನಿರ್ದೇಶಕ
ಜಯಪಾಲ್ ರೆಡ್ಡಿ, ಹಿರಿಯ ಕಾಂಗ್ರೆಸ್
ಮುಖಂಡರಾದ ಮೈಸೂರು ಸುಬ್ಬಣ್ಣ
ಹಾಜರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ನಾಳೆ ಚಿತ್ರದುರ್ಗಕ್ಕೆ ಮುಖ್ಯಮಂತ್ರಿ ಆಗಮನ : ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಬದಲಾವಣೆ…!

ಕಿಚ್ಚ & ಉಪ್ಪಿ ಜೊತೆಗೆ ಶಿವಣ್ಣ ಕೂಡ ಬಂದ್ರು.. : ಕಬ್ಜ ಬಗ್ಗೆ ಹೆಚ್ಚಾಯ್ತು ಮತ್ತಷ್ಟು ಕುತೂಹಲ..!