ಬೆಂಗಳೂರು: ಕಳೆದ ಎರಡು ಎರಡು ದಿನದಿಂದ ಸಾಕಷ್ಟು ಸುದ್ದಿಯಲ್ಲಿರುವುದು ಎಂದರೆ ಟ್ರಾಫಿಕ್ ರೂಲ್ಸ್ ಬ್ರೇಕ್ ದಂಡ. ಒಂದೇ ದಿನಕ್ಕೆ ಐದು ಕೋಟಿಗೂ ಹೆಚ್ಚಿನ ದಂಡ ಕಲೆಕ್ಟ್ ಆಗಿದೆ. ಇಂದಿನದ್ದು ಇನ್ನು ಮಾಹಿತಿ ಬರಬೇಕಿದೆ. ಆದ್ರೆ ದಂಡದಲ್ಲಿ ರಿಯಾಯಿತಿ ಬಿಟ್ಟಾಗಿನಿಂದ ಜನ ದಂಡ ಕಟ್ಟಲು ಓಡೋಡಿ ಬರುತ್ತಿದ್ದಾರೆ.
ಇಷ್ಟು ದಿನ ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಪೊಲೀಸರು ಸಿಕ್ಕರೆ ತಲೆಮರೆಸಿಕೊಳ್ಳುವುದು, ದಂಡ ಕಟ್ಟದೆ ಓಡಾಡುತ್ತಿದ್ದವರೆಲ್ಲಾ ನಿನ್ನೆಯಿಂದ ಕ್ಯೂನಲ್ಲಿ ನಿಂತಿದ್ದಾರೆ. ಯಾಕಂದ್ರೆ ಪ್ರತಿ ದಂಡದ ಮೇಲೂ ಅರ್ಧಕ್ಕೆ ಅರ್ಧ ರಿಯಾಯಿತಿ ನೀಡಲಾಗಿದೆ. ಹೀಗಾಗಿ ವಾಹನ ಸವಾರರು ತಾ ಮುಂದು ನಾ ಮುಂದು ಅಂತ ಬರ್ತಾ ಇದ್ದಾರೆ.
ಇನ್ನು ಹಲವು ವರ್ಷಗಳಿಂದ ದಂಡವನ್ನು ಪಾವತಿಸದೆ ಓಡಾಡುತ್ತಿದ್ದ ವ್ಯಕ್ತಿ ಇವತ್ತು ವೈಟ್ ಫೀಲ್ಡ್ ಸಂಚಾರಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ. ಒಟ್ಟು ಆತನ ಗಾಡಿಯ ಮೇಲೆ ಪೊಲೀಸರು 29 ಸಾವಿರ ದಂಡ ವಿಧಿಸಿದ್ದರು. ರಿಯಾಯಿತಿ ದರದಲ್ಲಿ ಆತನಿಗೆ 14,500 ದಂಡ ವಸೂಲು ಮಾಡಿದ್ದಾರೆ. ಈ ಫೋಟೋಗಳನ್ನು ಸಂಚಾರಿ ಪೊಲೀಸರು ಅಧಿಕೃತ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.