ರಾಮನಗರ: ಇತ್ತಿಚೆಗೆ ರಾಜಕೀಯ ವ್ಯಕ್ತಿಗಳು ಅದರಲ್ಲೂ ಅಧಿಕಾರದಲ್ಲಿರುವ ವ್ಯಕ್ತಿಗಳೇ ಬೀದಿಯಲ್ಲಿ ಜಗಳಕ್ಕೆ ನಿಲ್ಲುತ್ತಿದ್ದಾರೆ. ಇದನ್ನು ಜನ ನೋಡಿ ನೋಡಿ ಸುಸ್ತಾಗುತ್ತಿದ್ದಾರೆ. ಈಗ ರಾಮನಗರದಲ್ಲಿಯೂ ಅಂಥದ್ದೇ ಘಟನೆಯೊಂದು ನಡೆದಿದೆ. ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಸಂಸದ ಡಿಕೆ ಸುರೇಶ್ ನಡುವೆ ಏಕವಚನದಲ್ಲಿಯೇ ವಾಗ್ಯುದ್ಧ ಶುರುವಾಗಿದೆ.
ಇಂದು ರಾಮನಗರದಲ್ಲಿ ನೂತನ ಜಿಲ್ಲಾಸ್ಪತ್ರೆಯ ಕಟ್ಟಡದ ಉದ್ಘಾಟನೆ ಇತ್ತು. ಮೂರು ಪಕ್ಷದ ನಾಯಕರು ಈ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಮಾತಿನ ವಾಕ್ಸಮರ ನಡೆದಿದ್ದು, ಏಕವಚನದಲ್ಲಿಯೇ ಇಬ್ಬರು ಜಗಳವಾಡಿದ್ದಾರೆ. ಇದನ್ನು ನೋಡುತ್ತಿದ್ದ ಸಚಿವ ಸುಧಾಕರ್ ಅಕ್ಷರಶಃ ಶಾಕ್ ಆಗಿದ್ದಾರೆ.
ಕ್ರೆಡಿಟ್ ವಾರ್ ನಿಂದಾಗಿಯೇ ಈ ಜಗಳ ಶುರುವಾಯ್ತು ಎನ್ನಲಾಗುತ್ತಿದೆ. ಅಶ್ವತ್ಥ್ ನಾರಾಯಣ್ ಅವರನ್ನು ಡಿಕೆ ಸುರೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರೋಟೋಕಾಲ್ ಸರಿಯಾಗಿ ಪಾಲಿಸಲು ಆಗುವುದಿಲ್ಲ ಎಂದಿದ್ದಾರೆ. ಯಾರ್ ರೀ ಅವನು ಡಿಸ್ಟ್ರಿಜ್ಟ್ ಕಮೀಷನರ್ ಏಯ್.. ಇರ್ರೀ ಮಂತ್ರಿಗಳೇ ನಿಂತ್ಕೊಳ್ರೀ. ನನಗೂ ಪ್ರೋಟೋಕಾಲ್ ಇದೆ. ನಿಮ್ಮೊಬ್ಬರಿಗೆ ಅಲ್ಲ ನೀವೋಬ್ಬರೆ ಡಿಸ್ಟ್ರಿಕ್ಟ್ ಮಿನಿಸ್ಟರ್ ಆಗಿ, ಡೆಪ್ಯೂಟಿ ಚೀಫ್ ಮಿನಿಸ್ಟರ್ ಆಗಿದ್ದವರಿಗೆ ಗೊತ್ತಾಗಲ್ವಾ ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆಗ ಅಶ್ವತ್ಥ್ ನಾರಾಯಣ್ ಉತ್ತರ ನೀಡಿದ್ದು, ನಿಮ್ಮನ್ನು ಬರಬೇಡಿ ಅಂತ ಹೇಳಿದ್ದು ಯಾರು..? ಗಲಾಟೆ ಬೇಡ ಮಾತನಾಡೋಣಾ ಬನ್ನಿ ಎಂದಿದ್ದಾರೆ.