ಚಿತ್ರದುರ್ಗದಲ್ಲಿ ನಾಳೆ ಛಲವಾದಿ ನಾರಾಯಣಸ್ವಾಮಿಯವರಿಗೆ ಅಭಿನಂದನಾ ಸಮಾರಂಭ

1 Min Read

 ವರದಿ ಮತ್ತು ಫೋಟೋ ಕೃಪೆ                                 ಸುರೇಶ್ ಪಟ್ಟಣ್,   ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 17
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿಯವರಿಗೆ ಛಲವಾದಿ ಮಹಾ ಸಭಾದಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾಧ್ಯಕ್ಷರಾದ ಶೇಷಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಛಲವಾದಿ ನಾರಾಯಣಸ್ವಾಮಿಯವರು ಹೋರಾಟಗಾರರಾಗಿ ತಮ್ಮ ಬದುಕನ್ನು ಸವೆಸಿದ್ದಾರೆ, ಬಿಜೆಪಿ ಎಸ್.ಸಿ. ಮೋರ್ಚಾದ ರಾಜ್ಯಾಧ್ಯಕ್ಷರಾದ ಇವರನ್ನು ಬಿಜೆಪಿ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಿದೆ ಇದು ಸಮಾಜಕ್ಕೆ ಸಿಕ್ಕ ದೊಡ್ಡದಾದ ಗೌರವಾಗಿದೆ. ಇವರನ್ನು ಸನ್ಮಾನಿಸುವುದು ಸಮಾಜದ ಅದ್ಯ ಕರ್ತವ್ಯವಾಗಿದೆ ಎಂದರು.

ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾಗಿ ಆಗಸ್ಟ್ 18 ರಂದು ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿರುವ ಅವರನ್ನು ಸಮಾಜದವತಿಯಿಂದ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಅಂದು ಮಧ್ಯಾಹ್ನ 2.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ಸಮಾರಂಭ ನಡೆಯಲಿದ್ದು ಇದರಲ್ಲಿ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಅಂದು ನಗರದ ಅಂಬೇಡ್ಕರ್, ಮದಕರಿನಾಯಕ ಹಾಗೂ ಓನಕೆ ಒಬವ್ವ ಪ್ರತಿಮೆಗಳಿಗೆ ಮಾಲಾರ್ಪಣೆ ಮತ್ತು ವಿವಿಧ ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಆರ್ಶಿವಾದವನ್ನು ಪಡೆಯಲಿದ್ದಾರೆ.

ಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಮೂಷ್ಟರ್ ಚನ್ನಬಸಪ್ಪ, ಶ್ರೀಮತಿ ಭಾರ್ಗವಿ ದ್ರಾವಿಡ್, ಶಿವಪ್ರಸಾದ್ ನವೀನ್, ಪಿಳ್ಳೇಕೇರನ ಹಳ್ಳಿ ಗ್ರಾಮ ಪಂ ಸದಸ್ಯ ಚನ್ನಪ್ಪ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *