ಸಿನಿಮಾ ಮಾಡುವಾಗ ಕಮಿಟ್ ಆಗಿದ್ದ ಹಣವನ್ನು ನೀಡಿಲ್ಲ ಎಂದು ‘ಲವ್ ಬರ್ಡ್ಸ್’ ಸಿನಿಮಾ ನಿರ್ದೇಶಕ ಪಿಸಿ ಶೇಖರ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಿರ್ಮಾಪಕ ಚಂದ್ರು ಅಲಿಯಾಸ್ ಕಡ್ಡಿಪುಡಿ ಚಂದ್ರು ಮೇಲೆ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಒಂದು ಸಿನಿಮಾ ಮಾಡುವ ವಿಚಾರವಾಗಿ ಇಬ್ಬರ ನಡುವೆ 20 ಲಕ್ಷಕ್ಕೆ ಒಪ್ಪಂದವಾಗಿತ್ತಂತೆ. ಬಳಿಕ ಎಡಿಎಟಿಂಗ್ ಸೇರಿ 25 ಲಕ್ಷಕ್ಕೆ ಅಗ್ರಿಮೆಂಟ್ ಆಗಿತ್ತಂತೆ. ಆದರೆ ಕಡ್ಡಿಪುಡಿ ಚಂದ್ರು ಆರೂವರೆ ಲಕ್ಷ ಹಣವನ್ನು ಮಾತ್ರ ನೀಡಿದ್ದಾರಂತೆ. ಉಳಿದ ಹಣ ಕೇಳಲು ಹೋದ್ರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಇದ್ದಾರಂತೆ. ಜೊತೆಗೆ ಕ್ಲಿಯರೆನ್ಸ್ ಪೇಪರ್ ನಲ್ಲಿ ನಕಲಿ ಸಹಿ ಬಳಸಿಕೊಳ್ಳಲಾಗಿದೆಯಂತೆ. ಇದನ್ನೆಲ್ಲಾ ಇಟ್ಟುಕೊಂಡು ಪಿಸಿ ಶೇಖರ್ ದೂರು ದಾಖಲಿಸಿದ್ದಾರೆ.
ಸ್ಯಾಂಡಲ್ವುಡ್ ನಲ್ಲಿ ಪಿಸಿ ಶೇಖರ್ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಒಂದಷ್ಟು ಹೆಸರು ಮಾಡಿಕೊಂಡಿದ್ದಾರೆ. ಹಾಗೇ ಚಂದ್ರು ಅಲಿಯಾಸ್ ಕಡ್ಡಿಪುಡಿ ಚಂದ್ರು ನಟನೆ, ನಿರ್ಮಾಣವನ್ನು ಮಾಡಿದ್ದಾರೆ. ಹೆಸರು ಮಾಡಿರುವ ನಿರ್ದೇಶಕ ನಿರ್ಮಾಪಕರ ನಡುವೆಯೇ ಜಗಳ ಶುರುವಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.





GIPHY App Key not set. Please check settings