ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಉಪ್ಪಾರ ಸಮಾಜದ ಮುಖಂಡರ ನಿಯೋಗ ಮನವಿ

1 Min Read

 

ಬೆಂಗಳೂರು, (ಜುಲೈ 24) : ಚಿತ್ರದುರ್ಗದ ಭಗೀರಥ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ರಾದ ಜಗದ್ಗುರು ಶ್ರೀ ಡಾ:ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಉಪ್ಪಾರ ಸಮಾಜದ ಮುಖಂಡರ ನಿಯೋಗವು ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿತು.

ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರವರ್ಗ 1 ರಲ್ಲಿರುವ ಸಮಾಜವಾದ ಉಪ್ಪಾರ ಜನಾಂಗಕ್ಕೆ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದ್ದು, ವರದಿ ಸ್ವೀಕಾರ ಮಾಡಿ ಮೀಸಲಾತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ  ವಿದ್ಯಾರ್ಥಿ ನಿಲಯ, ಸಮುದಾಯ ಭವನ, ಶಿಕ್ಷಣ ಸಂಸ್ಥೆಗೆ ಜಮೀನು ಮಂಜೂರು ಮಾಡುವುದು, ರಾಜಕೀಯ ಪ್ರಾತಿನಿಧ್ಯ, ಶ್ರೀ ಭಗೀರಥ ಗುರುಪೀಠದ ಆಶ್ರಯದಲ್ಲಿ ಮಧುರ ಕಣಿವೆ ಸಹಕಾರ ಸಾಮುದಾಯಿಕ ಬೇಸಾಯ ಸಂಘಕ್ಕೆ 500 ಎಕರೆ ಜಮೀನು ಗುತ್ತಿಗೆ ಅವಧಿ ಮುಗಿದಿದ್ದು ಗುರುಪೀಠಫಾ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಹೆಸರಿಗೆ ಖಾಯಂ ಆಗಿ ಮಂಜೂರು  ಮಾಡುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಸಲ್ಲಿಸಿದರು.

ಸಮುದಾಯದ ಮುಖಂಡರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *