ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಕೇಸ್ ಸಂಬಂಧ ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಬಿಜೆಪಿಗೊಂದು ಸವಲಾಕಿದ್ದಾರೆ ಡಿಕೆ ಶಿವಕುಮಾರ್. ಇವತ್ತು ನಾವೂ ನೀವೆಲ್ಲಾ ಸೇರಿ ನಮ್ಮ ನೈತಿಕತೆಯಿಂದ ಇನ್ಮುಂದೆ ನಾವೆಲ್ಲಾ ಹೋರಾಟವನ್ನು ಮುಂದುವರೆಸಬೇಕು. ಇಲ್ಲಿ ಮಾಧ್ಯಮ ಸ್ನೇಹಿತರಿದ್ದಾರೆ. ಬಿಜೆಪಿ ಅವರಿಗೊಂದು ಸವಾಲಾಕ್ತಾ ಇದ್ದೀನಿ ನಾನು ಎಂದು ಗುಡುಗಿದ್ದಾರೆ.
ಯಾರಿಗೇಳಿ ಬಿಜೆಪಿ ಅವರಿಗೆ, ಅವರ ಪಕ್ಷದ ಅಧ್ಯಕ್ಷರಿಗೆ, ಅವರ ಶಾಸಕರುಗಳಿಗೆ. ಇನ್ಮುಂದೆ ಹೋರಾಟಕ್ಕೆ ಮಾಡಬೇಕಾದರೆ ಗಾಂಧಿ ಪ್ರತಿಮೆ ಮುಂದೆ ಕೂತು ಹೋರಾಟ ಮಾಡುವ ಹಕ್ಕನ್ನು ನೀವೂ ಕಳೆದುಕೊಂಡಿದ್ದೀರಿ. ಇದನ್ನ ತಾವೂ ಗಮನದಲ್ಲಿಟ್ಟುಕೊಳ್ಳಬೇಕು. ಮುಂದಕ್ಕೆ ಯಾವುದೇ ಕಾರಣಕ್ಕೂ ಗಾಂಧಿ ಪ್ರತಿಮೆ ಕೂತು ಹೋರಾಟ ಮಾಡಬಾರದು. ಬಡವರಿಗೆ ಕೂಲಿ ಕೊಡುವಂತಹ ಹೆಸರು, ಉದ್ಯೋಗ ಕೊಡುವಂತಹದ್ದಕ್ಕೆ ಗಾಂಧಿಜಿ ಹೆಸರನ್ನ ಇಟ್ಟಿದ್ದೀವಿ. ಆದರೆ ಅದನ್ನ ತೆಗೆದು ಹಾಕುತ್ತಾ ಇದ್ದೀರಲ್ಲ ನೀವೂ ದೇಶದ್ರೋಹಿಗಳು ಎಂಬುದನ್ನ ಮರೆಯಬಾರದು. ಇವತ್ತು ನೀವೆಲ್ಲಾ ಸೇರಿ ಗಾಂಧೀಜಿ ಹೆಸರಿನ ಮುಂದೆ ಪ್ರಧಾನ ಮಂತ್ರಿಗಳು ಹೊರಗಡೆ ದೇಶಕ್ಕೆ ಹೋದರೆ, ಬೇರೆ ದೇಶದ ಪ್ರಧಾನಿಗಳು ನಮ್ಮ ದೇಶಕ್ಕೆ ಬಂದರೆ ಗಾಂಧಿ ಸಮಾಧಿಗೆ ಹೋಗಿ ಪೂಜೆ ಮಾಡ್ತಾರೆ.
ಇಂದು ನೀವೂ ಅವರನ್ನು ಕೊಂದವರ ಹೆಸರನ್ನ ಮುಂದಕ್ಕೆ ತೆಗೆದುಕೊಂಡು, ಗಾಂಧೀಜಿ ಅವರನ್ನ ಕೊಲೆ ಮಾಡುವುದಕ್ಕೆ ಪ್ರಯತ್ನ ಮಾಡ್ತಾ ಇದ್ದೀರಿ. ನರೇಗಾ ಯೋಜನೆ ಈ ದೇಶದ ಜನರಿಗೆ ಉದ್ಯೋಗ ಕೊಡುವ ಯೋಜನೆ. ಆದ್ದರಿಂದ ಈ ನ್ಯಾಷನಲ್ ಹೆರಾಲ್ಡ್ ಕೇಸ್ ಮತ್ತು ನರೇಗಾ ಹೆಸರನ್ನು ಕಾಪಾಡುವುದಕ್ಕೆ ಬಿಜೆಪಿಯವರು ನಮ್ಮ ಇತಿಹಾಸವನ್ನ ತಿರುಚುವುದಕ್ಕೆ ಮಾಡುವ ಪ್ರಯತ್ನಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.






