ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ  ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ – ಯುವತಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ.  ವೃದ್ದರು ನಡೆಯಲು ಆಗದೇ ಇದ್ದರೂ ಕೂಡಾ ವೀಲ್​ಚೇರ್​ನಲ್ಲಿ ಬಂದು ಮತ ಚಲಾಯಿಸಿದ್ದಾರೆ.

ಚಳ್ಳಕೆರೆ ನಗರದಲ್ಲಿ 102 ,ವರ್ಷದ ಶತಾಯುಷಿ ಅಜ್ಜಿ ಮೆಹಬೂಬಿ ತನ್ನ ಇಳಿ ವಯಸ್ಸಿನಲ್ಲಿಯೂ ಮನೆಯಿಂದ ಮತ ಕೇಂದ್ರದವರಿಗೂ ನಡೆದುಕೊಂಡು ಬಂದು ಮತ ಚಲಾಯಿಸಿದ್ದಾರೆ.

ನಗರದ ಗಾಂಧಿನಗರದಲ್ಲಿ ಮಗಳು ಹಾಗೂ ಅಳಿಯ ಇವರ ಜತೆಯಲ್ಲಿ ವಾಸ ಮಾಡುತ್ತಿರುವ ಈ ಶತಾಯುಷಿ ಮೆಹಬೂಬಿ ತನ್ನು  ಅಳಿಯ ಮಗಳು ಜತೆ ನಗರದ ಕೃಷಿ ಇಲಾಖೆ ಮತ ಗಟ್ಟೆ ಕೆಂದ್ರಕ್ಕೆ ನಡೆದುಕೊಂಡು ಬಂದ ತನ್ನ ಹಕ್ಕನ ಚಲಾಯಿಸಿದರು.

ಮೆಹಬೂಬಿಗೆ ಈಗಾ 102 ವರ್ಷಗಳ ಕಳೆದಿವೆ. ಕಣ್ಣು ಚೆನ್ನಾಗಿಯೆ ಕಾಣುತ್ತವೆ, ಕಿವಿಗಳು ಸಹ ಚೆನ್ನಾಗಿ ಕೇಳುತ್ತಿವೆ.

ಈ ವೇಳೆ ಶತಾಯುಷಿ  ವೃದ್ದೆಯ ಜತೆ ಅಳಿಯ ಸೈಯದ್ ಸರ್ವರ್, ಮಗಳು ಬೇಗಂ ಉನ್ನಿಸಾ, ಮೊಮ್ಮಗ ಸೈಹಾದ್ ಅಹಮದ್ ಮೊಮ್ಮಗಳು ನಜ್ಮ ಕೌಸರ್ ಸಹ ಮತದಾನ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *