ನಿದ್ದೆಗಣ್ಣಿನಲ್ಲಿ ಟ್ರಕ್ ಗೆ ಕಾರು ಡಿಕ್ಕಿ : ಬಾಲಕ ಸೇರಿ 6 ಮಂದಿ ಸಾವು.. ಮೃತದೇಹ ಹೊರಗೆ ತೆಗೆಯಲು ಹರಸಾಹಸ..!

1 Min Read

ಹಾಸನ: ಬೆಳ್ಳಬೆಳಗ್ಗೆ ಇಂದು ಅಪಘಾತಕ್ಕೆ ಆರು ಜನರು ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ. ಮೃತರಲ್ಲಿ ಬಾಲಕ ಕೂಡ ಸೇರಿದ್ದಾನೆ. ಆ ಮಗುವಿನ ಮೃತದೇಹ ಕಂಡು ಸಾರ್ವಜನಿಕರು ಕೂಡ ಕಣ್ಣೀರಾಗಿದ್ದಾರೆ.

ಡ್ರೈವರ್ ಗಳು ಗಾಡಿ ಓಡಿಸುವಾಗ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ನಿದ್ದೆ ಬಂದರೂ ಅದನ್ನು ಕಂಟ್ರೋಲ್ ಮಾಡಿಕೊಂಡು ಓಡಿಸುವ ಸಾಹಸಕ್ಕೆ ಹೋಗಬಾರದು. ಎದುರು ಬರು ವಾಹನಗಳ ಲೈಟ್ ಗಳಿಂದ ಕಣ್ಣಿಗೆ ತೊಂದರೆಯಾಗಿ ಅದೆಷ್ಟೋ ಅಪಘಾತಗಳು ಸಂಭವಿಸಿವೆ. ಇದೀಗ ಹಾಸನದಲ್ಲೂ ಅಂಥದ್ದೇ ಘಟನೆ ನಡೆದಿದೆ. ಕಾರು ಡ್ರೈವರ್ ನಿದ್ದೆ ಗಣ್ಣಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಭೀಕರ ಅಪಘಾತವಾಗಿದೆ. ಬೆಳಗ್ಗಿನ ಜಾವ 5.30 ಈ ಘಟನೆ ನಡೆದಿದೆ.

ನಿದ್ದೆಗಣ್ಣಿನಲ್ಲಿದ್ದ ಡ್ರೈವರ್ ಕಾರು ಚಲಾಯಿಸುವಾಗ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಲ್ಲಿಂದ ಎಗರಿ ಟ್ರಕ್ ಗೆ ಗುದ್ದಿದೆ. ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರಾ, ಚೇತನ್, ರಾಕೇಶ್ ಎಂಬುವವರು ಸಾವನ್ನಪ್ಪಿದ್ದಾರೆ. ಮೃತರನ್ನೆಲ್ಲಾ ಹೊಸಕೋಟೆ ತಾಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು ಎನ್ನಲಾಗಿದೆ. ಈಗಾಗಲೇ ಮೃತರನ್ನು ಪತ್ತೆ ಹಚ್ಚಲಾಗಿದೆ. ಆದರೆ ಮೃತದೇಹವನ್ನು ಕಾರಿನಿಂದ ಹೊರಗೆ ತೆಗೆಯುವುದಕ್ಕೆ ಹರಸಾಹಸ ಪಟ್ಟಿದ್ದಾರೆ. ಮೃತದೇಹಗಳು ಛಿದ್ರ ಛಿದ್ರವಾಗಿದ್ದು, ಕಷ್ಟಪಟ್ಟು ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಪೊಲೀಸರು ಸ್ಥಳದಲ್ಲಿಯೇ ಇದ್ದು, ಜೆಸಿಬಿಯನ್ನು ತರಿಸಿ, ಮೃತದೇಹಗಳನ್ನು ಹೊರಗೆ ತೆಗೆಸಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತರ ಸಂಬಂಧಿಕರಿಗೆ ವಿಷಯವನ್ನು ತಿಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *