ಚಿತ್ರದುರ್ಗ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದರಲ್ಲೂ ಸ್ವಾತಂತ್ರ್ಯ ಹೋರಾಟಗಾರ ಹೋರಾಟವನ್ನು ಬಿಂಬಿಸುವ ನಾಟಕಗಳನ್ನು ಮಕ್ಕಳಿಂದ ಮಾಡಿಸಲಾಗುತ್ತದೆ. ಆದ್ರೆ ಕೋಟೆನಾಡಿನಲ್ಲಿ ಈ ರೀತಿಯ ನಾಟಕದಿಂದಾನೆ ಮಗುವೊಂದು ದುರಂತ ಅಂತ್ಯ ಕಂಡಿರುವ ಘಟನೆ ನಡೆದಿದೆ.
ನಗರದ ಖಾಸಗಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ತಯಾರಿ ನಡೆತುತ್ತಿತ್ತು. ಈ ವೇಳೆ 7ನೇ ತರಗತಿ ವಿದ್ಯಾರ್ಥಿ ಸಂಜಯ್ ಗೌಡ ನಾಟಕದಲ್ಲಿ ಪಾತ್ರದಾರಿಯಾಗಿದ್ದ. ಭಗತ್ ಸಿಂಗ್ ಪಾತ್ರವನ್ನು ಮಾಡುತ್ತಿದ್ದ. ಅದಕ್ಕೆಂದು ಶಾಲೆಯಲ್ಲಿ ಎಲ್ಲಾ ರೀತಿಯ ಪ್ರಾಕ್ಟೀಸ್ ಮಾಡಿಸಲಾಗಿತ್ತು. ಪ್ರಾಕ್ಟೀಸ್ ಎಲ್ಲಾ ಮುಗಿದ ಮೇಲೆ ಆ ಮಗು ಮನೆಗೆ ಹೋಗಿದೆ.
ಆದರೆ ಶಾಲೆಯಲ್ಲಿ ಹೇಳಿಕೊಟ್ಟ ನಾಟಕವನ್ನು ಮನೆಯಲ್ಲೂ ಪ್ರಾಕ್ಟೀಸ್ ಮಾಡಲು ಹೋದ ಸಂಜಯ್, ನೇಣು ಹಾಕುವ ದೃಶ್ಯವನ್ನು ಪ್ರಾಕ್ಟೀಸ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾನೆ. ಫ್ಯಾನಿಗೆ ಹಗ್ಗ ಹಾಕಿ, ಡೈಲಾಗ್ ಹೇಳುತ್ತಾ, ನಿಜವಾಗಿಯೂ ಸಾವಿನ ಕದ ತಟ್ಟಿದ್ದಾನೆ. ಈ ಸಮಯದಲ್ಲಿ ಮನೆಯಲ್ಲೂ ಯಾರು ಇರಲಿಲ್ಲ. ಫ್ಯಾನಿಂದ ಹಗ್ಗ ಕಿತ್ತು ಬಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಪೊಲೀಸರು ಭೇಟು ನೀಡಿ, ಪರಿಶೀಲನೆ ನಡೆಸಿದ್ದಾರೆ.