ಬ್ಯಾಂಕ್ ಉತ್ತಮ ಸ್ನೇಹಿತ, ಕಷ್ಟಕಾಲದ ಆಪದ್ಬಾಂಧವ :  ಚಂದ್ರಶೇಖರ್

1 Min Read

ಸುದ್ದಿಒನ್, ಚಿತ್ರದುರ್ಗ, ಜುಲೈ. 10 : ಆರ್ಥಿಕ ಅಭಿವೃದ್ಧಿ ವ್ಯಕ್ತಿಯ ಜೀವನದ ಪ್ರಮುಖವಾದ ವಿಚಾರ.  ಆರ್ಥಿಕತೆ ವಿಚಾರದಲ್ಲಿ ಸಾಕಷ್ಟು ಸಂದರ್ಭದಲ್ಲಿ  ವ್ಯಕ್ತಿಗೆ ಸ್ಪಂದನೆ ದೊರಕುವುದು ಕಷ್ಟ.  ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವ್ಯಕ್ತಿಯ ಬೆಳವಣಿಗೆಗೆ ಉತ್ತಮ ಅವಕಾಶಗಳಿವೆ.  ಬ್ಯಾಂಕ್‍ನಲ್ಲಿ ಉತ್ತಮ ಸಂಬಂಧ ಹೊಂದಿದ್ದರೇ, ವ್ಯಕ್ತಿ ಬಹುಬೇಗ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ. ಬ್ಯಾಂಕ್ ಉತ್ತಮ ಸ್ನೇಹಿತನಿದ್ದಂತೆ, ಬ್ಯಾಂಕ್ ಕಷ್ಟಕಾಲದ ಆಪದ್ಭಾವನ ಇದ್ದಂತೆ ಎಂದು ಕೆನರಾ ಬ್ಯಾಂಕ್ ಚಿತ್ರದುರ್ಗ ವಲಯದ ಆರ್‍ಎಹೆಚ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಗರದ ಮೆದೇಹಳ್ಳಿ ಕೆನರಾ ಬ್ಯಾಂಕ್ ಖಾಖೆಯಲ್ಲಿ ಗ್ರಾಹಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಆಧುನಿಕತೆಯ ಜೀವನ ಶೈಲಿಗೆ ಹೆಚ್ಚು ಹೆಚ್ಚು ದುಡಿಮೆ ಅಗತ್ಯವಿದೆ.  ಇಂತಹ ಸಂದರ್ಭದಲ್ಲಿ ಆರ್ಥಿಕ ನೆರವು ಬಹುಮುಖ್ಯ.  ಬ್ಯಾಂಕ್‍ಗಳು ಈ ರೀತಿ ಆರ್ಥಿಕ ನೆರವು ನೀಡುವುದರ ಜೊತೆಗೆ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಹೇಳಿದರು.  ಕೆನರಾ ಬ್ಯಾಂಕ್‍ನಿಂದ ನೀಡಲಾಗುವ ಹೌಸಿಂಗ್ ಲೋನ್, ವಾಹನ ಸಾಲ ಹಾಗೂ ಎಜುಕೇಷನ್ ಸಾಲಗಳ ಬಗ್ಗೆ ವಿವರಿಸಿದರು.

ಡಿವಿಜನಲ್ ಪ್ರಬಂಧಕರಾದ ಅನಿತಾ ಅವರು ಮಾತನಾಡಿ, ಬ್ಯಾಂಕ್ ಗ್ರಾಹಕರ ಪರವಾಗಿಯೇ ಕೆಲಸ ಮಾಡುತ್ತದೆ.  ಅದೇ ರೀತಿಯಲ್ಲಿ ಗ್ರಾಹಕರು ಬ್ಯಾಂಕನ್ನೂ ಕಾಪಾಡಬೇಕು.  ಬ್ಯಾಂಕ್‍ನಲ್ಲಿರುವ ಹಣ ಸಾರ್ವಜನಿಕರದ್ದಾಗಿದ್ದು, ಅದರ ರಕ್ಷಣೆಯೂ ಬ್ಯಾಂಕ್ ಮೇಲಿರುತ್ತದೆ.  ಸಾಲ ಪಡೆದವರು ಸಕಾಲದಲ್ಲಿ ಪಾವತಿ ಮಾಡುವುದರಿಂದ ಬ್ಯಾಂಕ್ ಹಾಗೂ ಗ್ರಾಹಕರಿಗೂ ಇಬ್ಬರಿಗೂ ಅನುಕೂಲವಾಗಲಿದೆ.  ಸಾಲ ಪಡೆದಿರುವವರು ಸಕಾಲದಲ್ಲಿ ಮರಪಾವತಿ ಮಾಡಬೇಕೆಂದು ಮನವಿ ಮಾಡಿದರು.

ಸಣ್ಣ ಘಟಕಗಳ ಸಾಲಸೌಲಭ್ಯದ ಬಗ್ಗೆ ವಂಶಿ, ಕೃಷಿ ಸಂಬಂಧಿಸಿದ ಸಾಲಗಳ ಬಗ್ಗೆ ಚಂದ್ರಶೇಖರ್ ಹಾಗೂ ಚಿತ್ರದುರ್ಗ ಮುಖ್ಯ ಶಾಖೆಯ ಪ್ರಬಂಧಕರಾದ ಮಾಲತಿಮತಿ,  ಮೆದೇಹಳ್ಳಿ ಶಾಖೆಯ ಪ್ರಬಂಧಕರಾದ ನಿವೇದಿತಾ ಹಾಗೂ ವಿಜಯ್ ಅವರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಸಾಲ ಮಂಜೂರಾತಿ ಪತ್ರಗಳನ್ನು ನೀಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *