ವಿಜಯಪುರ: ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗುವನ್ನು ಕಡೆಗೂ ರಕ್ಷಣೆ ಮಾಡಿದ್ದಾರೆ. ಸಾಕಷ್ಟು ಶ್ರಮದ ಬಳಿಕ ಸಾತ್ವಿಕ್ ರಕ್ಷಣೆ ಮಾಡಲಾಗಿದೆ. ಇಂಡಿ ತಾಲೂಕಿನ ಲಚ್ಯಾನ ಗ್ರಾಮದಲ್ಲಿದ್ದ ಕೊಳವೆ ಬಾವಿಗೆ ಸಾತ್ವಿಕ್ ಬಿದ್ದಿದ್ದ. ನಿನ್ನೆ ರಾತ್ರಿಯಿಂದಾನು ಮಗುವಿನ ರಕ್ಷಣಾ ಕಾರ್ಯವನ್ನು ಮಾಡಿದ್ದಾರೆ. ಸತತ 12 ಗಂಟೆಯ ಬಳಿಕ ಮಗುವನ್ನು ರಕ್ಷಣೆ ಮಾಡಲಾಗಿದೆ. ತೋಟದ ಮನೆಗೂ ಕೊಳವೆ ಬಾವಿಗೂ ಅಂದಾಜು 80ಮೀಟರ್ ದೂರವಿದೆ. ಜೀವಂತವಾಗಿ ಮಗುವನ್ನು ಹೊರ ತೆಗೆಯಲು ಸಾಕಷ್ಟು ಶ್ರಮವಹಿಸಲಾಗುತ್ತಿದೆ. ಈ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಕೋಟ್ಯಾಂತರ ಜನರು ಸಾತ್ವಿಕ್ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥನೆ ಮಾಡಿದ್ದರು. ಇದೀಗ ಆ ಪ್ರಾರ್ಥನೆ ಫಲಿಸಿದೆ. ಮಗು ಜೀವಂತ ಹೊರಗೆ ಬಂದಿದೆ.
ಕೊಳವೆ ಬಾವಿಯಲ್ಲಿ ಬಿದ್ದ ಬಳಿಕ ಸಾತ್ವಿಕ್ ಧ್ವನಿ ಕೇಳಿಸಿದೆ. ಬಳಿಕ ಬಾಲಕನ ತಲೆಯ ದೃಶ್ಯವನ್ನು ರಕ್ಷಣಾ ಸಿಬ್ಬಂದಿ ಸೆರೆಹಿಡಿಯಲಾಗಿದೆ. ಹನ್ನೆರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಈಗ ಮಗುವನ್ನು ಯಶಸ್ವಿಯಾಗಿ ಹೊರಗೆ ತೆಗೆದಿದ್ದಾರೆ.
ಮಗುವನ್ನು ಹೊರ ತೆಗೆದ ಬಳಿಕ ರಕ್ಷಣಾ ಸಿಬ್ಬಂದಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ ಸುರಕ್ಷಿತವಾಗಿ ಮೇಲೆ ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಗು ಹೊರಗೆ ಬರುತ್ತಿದ್ದಂತೆ ತಾಯಿ ನಿಟ್ಟುಸಿರು ಬಿಟ್ಟಿದ್ದಾರೆ.