ಈ ರೀತಿಯ ಕೆಲಸಗಳಿಂದಾನೇ ಪಾಕಿಸ್ತಾನ ಆಗಾಗ ಛೀಮಾಎಇ ಹಾಕಿಸಿಕೊಳ್ಳುತ್ತಾ ಇರುತ್ತೆ. ಇದೀಗ ಹಿಂದೂ ದೇವಾಲಯವನ್ನು ಟಾರ್ಗೆಟ್ ಮಾಡಿದೆ. ದಕ್ಷಿಣ್ ಸಿಂಧ್ ಪ್ರಾಂತ್ಯದಲ್ಲಿರುವ ಹಿಂದೂ ದೇಗುಲದ ಮೇಲೆ ರಾಕೆಟ್ ದಾಳಿ ಮಾಡಿ, ಉರುಳಿಸಿದೆ.
ಸಿಂಧ್ ಪ್ರಾಂತದ ಕಶ್ಮೋರ್ ನಲ್ಲಿ ಅಲ್ಪಸಂಖ್ಯಾತರೆಲ್ಲಾ ಸೇರಿಕೊಂಡು ಹಿಂದೂ ದೇಗುಲವನ್ನು ನಿರ್ಮಿಸಿಕೊಂಡಿದ್ದರು. ಬಗ್ರಿ ಎಂಬ ಸಮುದಾಯ ಈ ದೇಗುಲವನ್ನು ನೋಡಿಕೊಳ್ಳುತ್ತಿತ್ತು. ಆದರೆ ರಾಕೇಟ್ ದಾಳಿಯಿಂದ ಇದನ್ನು ಉರುಳಿಸಿದೆ. ಇದು ಎರಡನೇ ದಾಳಿಯಾಗಿದೆ.
ಈ ಸಂಬಂಧ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 8-9 ಮಂದಿ ಈ ದಾಳಿಯನ್ನು ನಡೆಸಿದ್ದಾರೆ. ರಾಕೆಟ್ ದಾಳಿಗೆ ಡೆಟೊನೆಟ್ ಬಳಸಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಕಳೆದ ಶುಕ್ರವಾರ ಕರಾಚಿಯಲ್ಲಿದ್ದ ಮಾರಿ ಮಾತಾ ದೇಗುಲದ ಮೇಲೂ ದಾಳಿ ಮಾಡಿದ್ದರು. ಬುಲ್ಡೋಜರ್ ಮೂಲಕ ದೇಗುವ ಉರುಳಿಸುವ ಯತ್ನ ನಡೆದಿತ್ತು. ಇದೀಗ ಮತ್ತೊಂದು ಹಿಂದೂ ದೇಗುಲದ ಮೇಲೆಯೇ ಯತ್ನ ನಡೆದಿದೆ.