ಕಾನ್ಪುರ: ಯುಪಿ ವಿಧಾನಸಭಾ ಚುನಾವಣೆ ಅನೌನ್ಸ್ ಆಗಿದೆ. ಆದ್ರೆ ಕೊರೊನಾ ಇರುವ ಕಾರಣ ರ್ಯಾಲಿ, ಜನ ಸೇರುವಂತ ಪ್ರಚಾರ ಕಾರ್ಯಕ್ರಮ ಮಾಡುವಂತಿಲ್ಲ ಎಂಬ ನಿಯಮವನ್ನ ಜಾರಿಗೆ ತಂದಿದ್ದಾರೆ. ಆದ್ರೆ ಈ ಮಧ್ಯೆ ಹೇಗಾದ್ರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಂಬಲ ಪಕ್ಷಗಳಲ್ಲಿದೆ.
ಇದೀಗ ಜನರ ಸಮಸ್ಯೆಯನ್ನ ಅರಿತು, ಜನರ ಬಳಿಗೆ ಹೋಗುವ ಕೆಲಸ ಮಾಡ್ತಿದ್ದಾರೆ ಬಿಜೆಪಿ ನಾಯಕರು. ರ್ಯಾಲಿ ಮಾಡುವಂತಿಲ್ಲ ಆದ್ರೆ ಮನೆ ಮನೆಗೆ ತೆರಳಿ ಪ್ರಚಾರ ಶುರು ಮಾಡಿಕೊಂಡವರೆ. ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿದ್ದಾಗ ಅಲ್ಲಿಗೆ ಹೋಗಿ, ನಿನ್ನ ಬಳಿ ರೇಷನ್ ಕಾರ್ಡ್ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕ ಸುರೇಂದ್ರ ಮೈಥಾನಿ ಈ ರೀತಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ತಾವೂ ಜನರ ಸಂಪರ್ಕ ಬೆಳೆಸುತ್ತಿರುವ ವಿಡಿಯೋ, ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಅದರಲ್ಲಿ ಸ್ನಾನ ಮಾಡುತ್ತಾ, ಅರೆಬೆತ್ತಲೆ ಇದ್ದ ವ್ಯಕ್ತಿಯ ಫೋಟೋ ಕೂಡ ವೈರಲ್ ಆಗಿದೆ. ಎಲ್ಲವೂ ಚೆನ್ನಾಗಿದೆಯಾ..? ಯಾವುದೇ ವಿಳಂಬವಿಲ್ಲದೆ ಅನುದಾನವೆಲ್ಲಾ ಸಿಕ್ತಾ ಇದೆಯಾ..? ರೇಷನ್ ಕಾರ್ಡ್ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವ್ಯಕ್ತಿಯೂ ತಲೆಗೆ ಶಾಂಪೂ ಹಾಕಿಕೊಂಡು, ಸ್ನಾನ ಮಾಡಿಕೊಂಡೆ ಹು ಅಂತ ಉತ್ತರ ಕೊಟ್ಟಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.