ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ನ. 10 : ನಗರದ ಹೊರವಲಯದ ಪಿಳ್ಳೇಕೇರನಹಳ್ಳಿಯಲ್ಲಿನ ನಗರಸಭೆಯ ಭೂಮಿಯನ್ನು ಕಬಳಿಸಲು ನಡೆದಿರುವ ಪ್ರಯತ್ನದ ವಿರುದ್ದ ಅಲ್ಲಿನ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿ ಭೂಮಿಯನ್ನು ಭೂರಹಿತರಾದ ನಮಗೆ ಭೂಮಿಯನ್ನು ನೀಡಿ ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ನೇತೃತ್ವದಲ್ಲಿ ಸ್ಥಳದಲ್ಲಿ ಪ್ರತಿಭಟನೆಯನ್ನು ನಡೆಸಿದ ಘಟನೆ ಸೋಮವಾರ ಬೆಳ್ಳಿಗೆ ನಡೆಯಿತು.
ಚಿತ್ರದುರ್ಗ ನಗರದಿಂದ 2 ಕಿ.ಮೀ.ದೂರದಲ್ಲಿನ ಪಿಳ್ಳೇಕೆರನಹಳ್ಳಿಯಲ್ಲಿನ ಸಮಾರು 4 ಎಕರೆ 28 ಗುಂಟೆ ಭೂಮಿ ನಗರಸಭೆಯ ವಶದಲ್ಲಿದ್ದು ಇಲ್ಲಿ ಹಲವಾರು ವರ್ಷಗಳಿಂದ ಭೂಮಿಯನ್ನು ಲೀಜ್‍ಗೆ ಪಡೆಯುವುದರ ಮೂಲಕ ಇಲ್ಲಿ ವ್ಯವಸಾಯವನ್ನು ಮಾಡಲಾಗುತ್ತಿತ್ತು. ಕಳೆದ 3 ವರ್ಷಗಳ ಹಿಂದೆ ಇಲ್ಲಿ ಯುಜಿಡಿಯ ಸೇಫ್ಟಿ ಟ್ಯಾಂಕ್ ನಿರ್ಮಾಣ ಮಾಡಿದ ಬಳಿಕ ಭೂಮಿಯನ್ನು ವ್ಯವಸಾಯಕ್ಕೆ ನೀಡುವುದು ನಿಲ್ಲಿಸಲಾಯಿತು. ಇದಾದ ನಂತರ 2 ವರ್ಷಗಳ ಬಳಿಕೆ ಪಿಳ್ಳೇಕೇರನಹಳ್ಳಿಯಲ್ಲಿ ಮನೆ ಇಲ್ಲದವರು ಇಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡಲು ಪ್ರಾರಂಭ ಮಾಡಿದರು. ಇದಾದ ನಂತರ ಕಳೆದ ವರ್ಷ ಇಲ್ಲಿಎಗ ಏಕಾಏಕಿ ರಾತ್ರಿ ಸಮಯದಲ್ಲಿ ಜೆಸಿಬಿಯನ್ನು ತಂದು ಇಲ್ಲಿ ಹಾಕಿದ್ದ ಗುಡಿಸಲುಗಳನ್ನು ಕೆಡವಿ ಈ ಜಾಗ ನನ್ನದು ಇಲ್ಲಿ ಯಾರೂ ಸಹಾ ಗುಡಿಸಲು ಹಾಕಬಾರದೆಂದು ತಾಕಿತು ಮಾಡಲಾಯಿತು. ಆದರೂ ಸಹಾ ಕೆಲವರು ಗುಡಿಸಲನ್ನು ಹಾಕಲಾಯಿತು. ಈ ಸಮಯದಲ್ಲಿ ರಾತ್ರೋ ರಾತ್ರಿ ಗುಡಿಸಲುಗಳಿಗೆ ಬೆಂಕಿಯನ್ನು ಹಚ್ಚಲಾಯಿತು.
ಈ ಜಾಗಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ರವರಿಗೆ ಮನವಿಯನ್ನು ನೀಡಿ ಈ ಜಾಗವನ್ನು ನಮಗೆ ನೀಡುವಂತೆ ಮನವಿಯನ್ನು ಸಲ್ಲಿಸಲಾಯಿತು. ಇದರ ಸಂಬಂಧ ಅಂದಿನ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳು ಪರೀಶಿಲನೆಯನ್ನು ಮಾಡಿ ಜಾಗವನ್ನು ಯಾಥಾವಥಾಗಿ ಕಾಯ್ದಿಕೊಳ್ಳುವಂತೆ ಸೂಚನೆಯನ್ನು ನೀಡಿದರು. ಆದರೆ ಇಂದು ನಾವುಗಳು ಗುಡಿಸಲನ್ನು ಹಾಕಿಕೊಳ್ಳುತ್ತಿರುವಾಗ ಪೋಲಿಸರು ಏಕಾಏಕಿ ಆಗಮಿಸಿ ನಮ್ಮ ಕೆಲಸಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಈ ಜಾಗ ನಗರಸಭೆಗೆ ಸೇರಿದ್ದು, ಇದರಲ್ಲಿ ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ಈ ಜಾಗವನ್ನು ಹೊಡೆಯಲು ಸಂಚುನ್ನು ರೂಪಿಸಿದ್ದಾರೆ ಇದಕ್ಕೆ ಬೇಕಾದ ಅಗತ್ಯವಾದ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿ ಮಾಡಿದ್ದಾರೆ ಆದರೆ ನಮ್ಮಲ್ಲಿ 1970ರಿಂದ ನಗರಸಭೆಯ ಹರಾಜಿನಲ್ಲಿ ಈ ಜಾಗವನ್ನು ಪಡೆದಿರುವ ಬಗ್ಗೆ ದಾಖಲೆಗಳು ಇವೆ ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ. ಈ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡಲು ಪೋಲಿಸರು ಅಡ್ಡಿ ಮಾಡುತ್ತಾ ಗುಡಿಸಲು ನಿರ್ಮಾಣದ ಕಾರ್ಯವನ್ನು ಸ್ಥಗಿತಗೊಳಿಸಿದ್ದರು, ಇದರ ಬಗ್ಗೆ ಪ್ರತಿಭಟನಾಕಾರರು ಪೋಲಿಸರನ್ನು ಯಾಕೇ ಹೀಗೇ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ನಮಗೆ ಇದರ ಬಗ್ಗೆ ದೂರು ಬಂದಿದೆ. ಈ ಹಿನ್ನಲೆಯಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಬಂದಿರುವುದಾಗಿ ತಿಳಿಸಿದಾಗ ಪ್ರತಿಭಟನಾಕಾರರು ಇಲ್ಲಿ ಯಾರೂ ಸಹಾ ಗಲಾಟೆ ಮಾಡಲು ಬಂದಿಲ್ಲ, ನಮ್ಮ ಗುಡಿಸಲುಗಳನ್ನು ಹಾಕಿಕೊಳ್ಳಲಾಗುತ್ತಿದೆ ಇಲ್ಲಿ ಯಾರೂ ಸಹಾ ಗಲಭೆ ಮಾಡುತ್ತಿಲ್ಲ ಎಲ್ಲರು ತಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದಾರೆ ಹಾಗೇ ಏನಾದರೂ ಶಾಂತಿಗೆ ಭಂಗವಾದರೆ ನೀವು ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಿಳ್ಳೇಕೇರನಹಳ್ಳಿಯ ಗ್ರಾಮಸ್ಥರು ಭಾಗವಹಿಸಿದ್ದರು.






