ದರ್ಶನ್ – ಪವಿತ್ರಾ ಗೌಡ ವಿಚಾರಣೆ ಮುಂದೂಡಿದ ಕೋರ್ಟ್

1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಕಳೆದ ವಾರವಷ್ಟೇ ಪೊಲೀಸರು ಕೋರ್ಟ್ ಗೆ ದೋಷಾರೋಪವನ್ನು ಹೊರಿಸಿದ್ದರು. ಆ ಸಂಬಂಧ ಕೋರ್ಟ್ ನಲ್ಲಿ ವಾದ ಪ್ರತಿವಾದವೂ ಆರಂಭವಾಗಿತ್ತು. ದರ್ಶನ್, ಪೊಲೀಸರ ದೋಷಾರೋಪವನ್ನು ತಳ್ಳಿ ಹಾಕಿದ್ದರು‌. ಇಂದು ಕೋರ್ಟ್ ನಲ್ಲಿ ಮತ್ತೆ ವಿಚಾರಣೆ ಆರಂಭವಾಗಿತ್ತು. ಇದೀಗ ಇಂದು ಮತ್ತೆ ಕೋರ್ಟ್ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಇಂದು ಕೋರ್ಟ್ ನಲ್ಲಿ ವಿಚಾರಣೆ ಆರಂಭವಾದಾಗ ಆರೋಪಿಗಳ ಪರ ವಕೀಲರು ಈ ಕೇಸಲ್ಲಿ ಸಾವಿರ ಪುಟಗಳ ದಾಖಲಿಗಳು ಇದಾವೆ. ಇವುಗಳನ್ನೆಲ್ಲ ಅಧ್ಯಯನ ಮಾಡಿ. ವಿಚಾರಣೆಗೆ ಸಿದ್ಧರಾಗಲು ತಮಗೆ ಕಾಲಾವಕಾಶ ಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ತಮಗೆ ವಿಚಾರಣೆಗೆ ಸಿದ್ಧರಾಗಿ ವಾದ ಮಂಡನೆ ಮಾಡುವುದಕ್ಕೆ 15 ದಿನಗಳ ಕಾಲಾವಕಾಶ ಬೇಕು ಎಂದು ಕೋರ್ಟ್ ಗೆ ಮನವಿ ಮಾಡಿಕೊಂಡ ಬೆನ್ನಲ್ಲೇ 64ನೇ ಸಿಸಿಹೆಚ್ ಕೋರ್ಟ್ ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿಕೆ ಮಾಡಿದೆ.

ಈಗಾಗಲೇ ಪ್ರಾಸಿಕ್ಯೂಷನ್ ಪರ ವಕೀಕರಾದ ಪ್ರಸನ್ನ ಕುಮಾರ್ ಅವರು, ಆರೋಪಿಗಳ ಪರ ವಕೀಲರು ಬೇಕಂತನೇ ವಿಚಾರಣೆಯನ್ನು ತಡ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ 6 ತಿಂಗಳ ಒಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ಹೇಳಿದೆ. ಆದರೆ ಆರೋಪಿಗಳ ಪರ ವಕೀಲರು ಅಧ್ಯಯನ ಮಾಡುವುದಕ್ಕೆ ಸಮಯಾವಕಾಶ ಕೇಳಿದ್ದಾರೆ. ಕೋರ್ಟ್ ಈ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಇದರ ನಡುವೆಯೇ ದರ್ಶನ್ ಆಪ್ತ ಧನ್ವೀರ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ‌. ಪರಪ್ಪನ ಅಗ್ರಹಾರದ ವಿಡಿಯೋಗೂ ಧನ್ವೀರ್ ಗೂ ಸಂಬಂಧ ಇದ್ಯಾ ಎಂಬುದನ್ನ ವಿಚಾರಿಸಿ, ಕಳುಹಿಸಿದೆ.

Share This Article