ಲಕ್ನೋ: ಯುಪಿ ಎಲೆಕ್ಷನ್ ಅನೌನ್ಸ್ ಆದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಸಿಎಂ ಆದಿತ್ಯಾನಾಥ್ ಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಒಬ್ಬಿಬ್ಬರೇ ಸಚಿವರು ರಾಜೀನಾಮೆ ನೀಡುತ್ತಿದ್ದು, ಬಿಜೆಪಿಗೂ ಇದು ಹಿನ್ನಡೆಯಾದಂತಾಗುತ್ತದೆ. ಇದೀಗ ಶಾಕಿಂಗ್ ವಿಚಾರವೊಂದನ್ನ ಧರಂ ಸಿಂಗ್ ಸೈನಿ ಹೇಳಿದ್ದಾರೆ.
ಯುಪಿಯಲ್ಲಿ ಇನ್ಮುಂದೆ ಪ್ರತಿದಿನ ಜನವರಿ 20 ರವರೆಗೆ ಒಬ್ಬ ಸಚಿವ, ಇಬ್ಬರು ಅಥವಾ ಮೂವರು ಶಾಸಕರು ರಾಜೀನಾಮೆ ನೀಡ್ತಾರೆ ಎಂಬ ಮಾಹಿತಿಯನ್ನ ನೀಡಿದ್ದಾರೆ. ಧರಂ ಸಿಂಗ್ ಸೈನಿ ಕೂಡ ಇತ್ತೀಚೆಗೆ ಯೋಗಿ ಆದಿತ್ಯಾನಾಥ್ ಸರ್ಕಾರದಿಂದ ಹೊರ ಬಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೈನಿ, ಬಿಜೆಪಿಯಲ್ಲಿ ನಾನು ಹೇಳುವುದನ್ನು ಕೇಳುವವರು ಯಾರೂ ಇರಲಿಲ್ಲ. ಹೀಗಾಗಿ ಒಂದು ದಿನ ಸರ್ಕಾರದ ವಿರುದ್ಧ ರಾಜ್ಯದ 140 ಶಾಸಕರು ಧರಣಿ ಕುಳಿತು ಬೆದರಿಕೆ ಹಾಕುವ ಸಮಯ ಬಂದಿದೆ. ಈಗಾಗಲೇ ನಾನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದು, ಶುಕ್ರವಾರ ಹೆಚ್ಚಿನ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.