ಕಬ್ಬು ಬೆಳೆಗಾರರ ಹೋರಾಟಕ್ಕೆ ವಿಜಯೇಂದ್ರ ಸಾಥ್ : ಬಿಜೆಪಿ ಸರ್ಕಾರಕ್ಕಿಂತ ಹೆಚ್ಚಿನ ಬೆಲೆ ಕೊಟ್ಟಿದ್ದೇ ನಾವು : ಡಿಕೆಸು

1 Min Read

ಬೆಂಗಳೂರು: ಬೆಳಗಾವಿಯಲ್ಲಿ ರೈತರು ಅಹೋರಾತ್ರಿ ಧರಣಿಯನ್ನ ನಡೆಸುತ್ತಿದ್ದಾರೆ. ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಒಂದು ಟನ್ ಕಬ್ಬಿಗೆ 3,500 ಬೆಲೆ ನಿಗದಿ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ರೈತರ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ.

ರೈತರ ಬೇಡಿಕೆ ವಿಚಾರಕ್ಕೆ ಮಾತನಾಡಿದ ಡಿಕೆ ಸುರೇಶ್ ಅವರು, ವಿರೋಧ ಪಕ್ಷದವರು ಅಧಿಕಾರದಲ್ಲಿದ್ದಾಗ ಏನು ದರವನ್ನ ನಿಗದಿ ಮಾಡಿತ್ತು, ಕಾಂಗ್ರೆಸ್ ಸರ್ಕಾರ ಅದಕ್ಕಿಂತ ಹೆಚ್ಚಿನ ದರವನ್ನ ನೀಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ರೈತರು ಬೆಂಬಲ ಬೆಲೆ ನೀಡುವಂತೆ ಒತ್ತಾಯ ಹಾಕಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ರೈತರು ಧರಣಿ ನಡೆಸುತ್ತಿರುವ ವಿಚಾರದ ಬಗ್ಗೆ ಚರ್ಚೆ ನಡೀತಾ ಇದೆ. ನಾಳೆ ಕ್ಯಾಬಿನೆಟ್ ನಲ್ಲಿಯೂ ಚರ್ಚೆಯಾಗಬಹುದು. ಸಿಎಂ ಸಿದ್ದರಾಮಯ್ಯ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನ ನೋಡಬೇಕಿದೆ. ಅಲ್ಲಿನ ಸ್ಥಳೀಯರೆಲ್ಲರ ಬಳಿಯು ಹೋಗಿ ಮಾತನಾಡಿಕೊಂಡು ಬರ್ತಾರೆ. ಬಹುಶಃ ಇದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ನಾಳೆ ಒಂದು ತೀರ್ಮಾನ ತೆಗೆದುಕೊಳ್ಳಬಹುದು. ಫ್ಯಾಕ್ಟರಿಗಳನ್ನ ಹೊಂದಿರುವವರು ಸಚಿವರು ಇದ್ದಾರೆ. ಎಲ್ಲರೂ ಒಮ್ಮೆ ಪರಿಶೀಲನೆ ನಡೆಸುತ್ತಾರೆ. ಕಾಂಗ್ರೆಸ್ ಅಂತಾನೇ ಅಲ್ಲ ಬಿಜೆಪಿ, ಜೆಡಿಎಸ್ ಪಕ್ಷದವರು ಕಾರ್ಖಾನೆಯನ್ನ ಹೊಂದಿದ್ದಾರೆ. ನಾವೂ ಅವರಿಗೆ ಬಿಸಿನೆಸ್ ಮಾಡ್ಬೇಡ ಅಂತ ಹೇಳುವುದಕ್ಕೆ ಆಗುತ್ತಾ..? ರೈತರು ಹೆಚ್ಚುವರಿಯಾದಂತ ಹಣವನ್ನ ಕೇಳ್ತಾ ಇದ್ದಾರೆ. ಆದರೆ ಬೆಳಗಾವಿಗೆ ಮಾತ್ರ ಅಲ್ಲ ಎಲ್ಲಾ ಜಿಲ್ಲೆಗೂ ಅದೇ ದರವಾಗುತ್ತದೆ ಎಂದಿದ್ದಾರೆ.

Share This Article