ಜಾಮೀನು ಕೋರಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ..!

1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಎರಡನೇ ಬಾರಿ ಅರೆಸ್ಟ್ ಆಗುವುದಕ್ಕೂ ಮುನ್ನವೇ ಸುಪ್ರೀಂ ಕೋರ್ಟ್ ನಲ್ಲಿ ಈ ಕೇಸ್ ನ ಅರ್ಜಿ ವಿಚಾರಣೆ ನಡೆದಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನನ್ನು ರದ್ದು ಮಾಡಬೇಕೆಂದು ಪೊಲೀಸ್ ಇಲಾಖೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದ ಕಾರಣ ಸುಪ್ರೀಂ ಕೋರ್ಟ್ ಜಾಮೀನನ್ನು ರದ್ದು ಮಾಡಿತ್ತು. ಸಿಂಗಲ್ ಪೇರೆಂಟ್, ವಯಸ್ಸಾದ ತಂದೆ ತಾಯಿಯನ್ನ ನೋಡಿಕೊಳ್ಳಬೇಕೆಂದು ಕಾತಣ ಕೊಟ್ಟರು ಜಾಮೀನು ರದ್ದಾಗಿತ್ತು. ಇದೀಗ ಮತ್ತೆ ಸುಪ್ರೀಂ ಕೋರ್ಟ್ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ಸಂಬಂಧ ಕರ್ನಾಟಕ ಸರ್ಕಾರದ ಪರ ವಕೀಲರಾದ ಅನಿಲ್ ಕುಮಾರ್, ಜಾಮೀನು ಕೋರಿರುವ ಪುನರ್ ಪರಿಶೀಲನಾ ಅರ್ಜಿಯಲ್ಲಿ ಯಾವುದೇ ಹೊಸ ಅಂಶಗಳನ್ನು ಉಲ್ಲೇಖ ಮಾಡಿಲ್ಲ. ಮೂಲಭೂತ ಹಕ್ಕುಗಳು ಉಲ್ಲಂಘನೆ ಆಗಿದ್ದರೆ ಮಾತ್ರವೇ ಜಾಮೀನು ಕೋರಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರಕರಣದಲ್ಲಿ ಅಂಥ ಯಾವುದೇ ಉಲ್ಲಂಘನೆ ಆಗಿಲ್ಲ. ಜೊತೆಗೆ ಕೋರ್ಟ್ ನಲ್ಲಿ ಟ್ರಯಲ್ ಶುರುವಾಗುತ್ತಿದೆ. ಇಂಥ ಹೊತ್ತಲ್ಲಿ ಬೇಲ್ ಅರ್ಜಿಗಳ ತೀರ್ಪು ಮರುಪರಿಶೀಲನೆ ಮಾಡಿ ಹೊಸ ತೀರ್ಪು ನಿರೀಕ್ಷೆ ಮಾಡುವುದು ಕಷ್ಟ.

ಅರ್ಜಿದಾರರು ಈಗ ಪರಿಶೀಲನೆ ಅರ್ಜಿಯಲ್ಲಿ ಉಲ್ಲೇಖ ಮಾಡಿರುವ ಎಲ್ಲಾ ಅಂಶಗಳ ವಿಚಾರಣೆ ವೇಳೆಯೆರ ಹೇಳಿದ್ದಾರೆ. ಹೊಸ ಅಂಶಗಳು ಏನು ಇಲ್ಲ. ಇದು ನ್ಯಾಯಮೂರ್ತಿಗಳ ಚೇಂಬರ್ ನಲ್ಲಿ ವಿಚಾರಣೆ ಆಗುತ್ತೆ. ಚೇಂಬರ್ ನಲ್ಲಿ ಸುಧೀರ್ಘ ವಾದ – ಪ್ರತಿವಾದಕ್ಕೆ ಅವಕಾಶ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಸರ್ಜಾರದ ಪರ ವಕೀಲ ಅನಿಲ್ ನಿಶಾನಿ ಅಭಿಪ್ರಾಯ ಪಟ್ಟಿದ್ದಾರೆ.

Share This Article