ಬೆಂಗಳೂರು: ಸಿಎಂ ಸ್ಥಾನಕ್ಕೆ ಏರಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಕಾಯ್ತಾ ಇದ್ದಾರೆ. ಅದರಲ್ಲೂ ನವೆಂಬರ್ ಕ್ರಾಂತಿಯಲ್ಲಿ ಸಿಎಂ ಸ್ಥಾನ ಬದಲಾವಣೆಯಾಗಲಿದೆ ಎನ್ನಲಾಗಿದೆ. ಅದರಲ್ಲೂ ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನವೆಂಬರ್ ನಲ್ಲಿ ಸಿಎಂ ಹುದ್ದೆ ಅಲಂಕರಿಸುವುದಕ್ಕೆ ಡೇಟ್ ಫಿಕ್ಸ್ ಆಗಿದೆ ಅಂತಾನೆ ಮಾತುಗಳು ಕೇಳಿ ಬರ್ತಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡದ ಬಗ್ಗೆ ಮಾತನಾಡಿದ್ದು, ಸರ್ಕಾರದ ಪ್ರತಿ ಕಟ್ಟಡದಲ್ಲಿ ಕನಿಷ್ಠ 60ರಷ್ಟು ಶೇಕಡ ಇರುವ ಕನ್ನಡ ಫಲಕವನ್ನು ಹಾಕಬೇಕು ಎಂದು ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಪರ ಅನೇಕ ಆದೇಶಗಳು ಬರುತ್ತವೆ. ನಮ್ಮದೇ ಆದ ಕನ್ನಡದ ಬಾವುಟ ಇದೆ, ಗೀತೆ ಇದೆ, ತಾಯಿ ಭುವನೇಶ್ವರಿ ತಾಯಿಯ ವಿಗ್ರಹವನ್ನು ಕೂಡ ಸ್ಥಾಪನೆ ಮಾಡಿದ್ದೇವೆ. ಸರ್ಕಾರ ಪ್ರತಿ ಕಟ್ಟಡದಲ್ಲಿ ಕನಿಷ್ಠ ಶೇಕಡವಾರು ಇರುವ ಕನ್ನಡ ಫಲಕ ಹಾಕಬೇಕು ಎಂಬ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಆದೇಶಗಳು ಬರಲಿವೆ ಎಂದಿದ್ದಾರೆ.
ಇದೆ ವೇಳೆ ನವೆಂಬರ್ ಕ್ರಾಂತಿ ಹಾಗೇ ಸಿಎಂ ಹುದ್ದೆಗೇರಲು ಸಮಗ ನಿಗದಿ ಮಾಡಿರುವ ಬಗ್ಗೆ ಮಾತನಾಡಿ, ಇದರಲ್ಲಿ ಯಾರೂ ಕೂಡ ಮಾತನಾಡಬಾರದು. ನಾನು ಮತ್ತು ಮುಖ್ಯಮಂತ್ರಿಗಳು ಏನು ಮಾತನಾಡಿದ್ದೇವೆ ಅದು ಮಾತ್ರ ಮಾತು. ಅದು ಬಿಟ್ಟರೆ ಯಾರ ಮಾತಿಗೂ ಇಲ್ಲಿ ಕಿಮ್ಮತ್ತು ಇಲ್ಲ. ಒಮ್ಮತದಿಂದ ಇದ್ದಿದ್ದಕ್ಕೆ 135 ಸ್ಥಾನಗಳನ್ನು ಗೆದ್ದಿದ್ದೇವೆ ಎಂದಿದ್ದಾರೆ. ಈ ಮೂಲಕ ಯಾವ ದಿನಾಂಕವನ್ನು ನಿಗದಿ ಮಾಡಿಲ್ಲ ಎಂಬುದನ್ನ ಹೇಳಿದ್ರಾ ಎಂಬ ಪ್ರಶ್ನೆ ಮತ್ತೆ ಹುಟ್ಟುಕೊಂಡಿದೆ.






