ರಾಮನಗರ: ತೀವ್ರ ವಿರೋಧದ ನಡುವೆ ಇದೀಗ ಮೇಕೆದಾಟು ಯೋಜನೆಯನ್ನ ಕಾಂಗ್ರೆಸ್ ನಾಯಕರು ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು, ಜನರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆ ಸ್ಥಗಿತಗೊಳಿಸಿದ್ದೇವೆ ಎಂದಿದ್ದಾರೆ.
ಜನರ ಆರೋಗ್ಯಕ್ಕೆ ನಾವೂ ಪ್ರಾಮುಖ್ಯತೆ ನೀಡುತ್ತೇವೆ. ಹೀಗಾಗಿ ಪಾದಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಬಿಜೆಪಿಯವರ ಜನಾಶೀರ್ವಾದ ಯಾತ್ರೆಗೆ ಇರದ ಕೋವಿಡ್ ರೂಲ್ಸ್ ಗಳು ನಮ್ಮ ಪಾದಯಾತ್ರೆಗೆ ಮಾತ್ರ ಯಾಕೆ ಮಾಡಿದ್ರು..? ಈ ಸರ್ಕಾರ ನಿಷ್ಪಕ್ಷಪಾತವಾಗಿಲ್ಲ ಎಂದು ಹರಿಹಾಯ್ದಿದ್ದಾರೆ.
ಇನ್ನು ಕೊರೊನಾ ಹೆಚ್ಚಳಕ್ಕೆ ಕಾಂಗ್ರೆಸ್ ನವರ ಪಾದಯಾತ್ರೆಯೇ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಬಿಜೆಪಿ ಶಾಸಕರು, ಸಚಿವರು ಮಾಡುವ ವ ರ್ಯಾಲಿಗೆ ಮಾತ್ರ ಅವಕಾಶವಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲೇ ಜಾತ್ರೆಗೆ ಅನುಮತಿ ನೀಡಲಾಗಿದೆ. ಅವರ ಮೇಲೆ ಕೇಸ್ ಬೀಳಲೇ ಇಲ್ಲ. ದೇಶಾದ್ಯಂತ ಕೇಸ್ ಗಳು ಜಾಸ್ತಿಯಾಗ್ತಿವೆ ಅದನ್ನ ನಮ್ಮ ತಲೆಗೆ ಕಟ್ಟುವ ಯತ್ನ ನಡೆದಿದೆ ಎಂದು ಸರ್ಕಾರದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶಗೊಂಡು ಮಾತನಾಡಿದ್ದಾರೆ.