ಯಾವತ್ತಾದ್ರೂ ಅಧಿಕಾರ ಕೊಟ್ಟಿದ್ದೀರಾ ಈಗ ಪ್ರಶ್ನೆ ಮಾಡೋಕೆ : ನಿಖಿಲ್ ಕುಮಾರಸ್ವಾಮಿ ಆಕ್ರೋಶ

1 Min Read

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಸಿನಿಮಾ ಬಿಟ್ಟು ಈಗ ಸಂಪೂರ್ಣವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ರಾಜಕಾರಣದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಆದರೆ ಜನ ಆಶೀರ್ವಾದ ಮಾಡ್ತಿಲ್ಲ, ಒಮ್ಮೆಯೂ ಗೆಲ್ಲಿಸುತ್ತಿಲ್ಲ ಎಂಬ ಬೇಸರ ಅವರನ್ನ ಕಾಡುತ್ತಿದೆ. ಹೀಗಾಗಿ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಉಪಚುನಾವಣೆಯಲ್ಲಿ ಯಾರು ಯಾರು ಎಲ್ಲೆಲ್ಲಿ ವ್ಯವಹಾರ ಮಾಡಿಕೊಂಡಿದ್ದರು ಅಂತ ನನಗೆ ಗೊತ್ತಿರಲಿಲ್ವಾ..? ಏನಣ್ಣ ನನ್ನ ದಡ್ಡ ಅಂದುಕೊಂಡು ಬಿಟ್ಟಿದ್ದೀರಾ..? ಈಗ ಹಾಲಿ ಶಾಸಕರಾಗಿ ಆಯ್ಕೆ ಆಗಿದ್ದಾರಲ್ಲ ಮಂಡ್ಯ ಎಲರಕ್ಷನ್ ನಿಲ್ಲೋಕೆ ಹೋಗಿದ್ದರಲ್ಲ, ಅವರು ಈ ಹಿಂದೆ ಏಳು ವರ್ಷ ಎಲ್ಲಿದ್ದರು..? ಎಷ್ಟು ವರ್ಷಗಳ ಕಾಲ ಎಂಎಲ್ಎ ಸ್ಥಾನ ಕೊಟ್ಟಿದ್ದೀರಿ..? ಎಂದು ಪ್ರಶ್ನೆ ಮಾಡಿದ್ದಾರೆ.

ನನಗೆ ಆಶೀರ್ವಾದ ಮಾಡಿದ್ದೀರಾ ಈಗ ಪ್ರಶ್ನೆ ಮಾಡುವುದಕ್ಕೆ. ನೀವು ಎಲ್ಲಾ ಕೇಳಿದ್ದೀರಿ ಎಂದು ನಾನು ಬಂದು ತಲೆ ಕೊಟ್ಟೆ. ಆದರೂ ನಾನು ಮನೆಯಲ್ಲಿ ಕುಳಿತಿಲ್ಲ. ಪಕ್ಷ ಕಟ್ಟುವುದಕ್ಕೆ ಯಾರು ಆಗಲ್ಲ. ಯಾರು ಹೊಣೆ ಆಗಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಓಡಾಡುತ್ತಿದ್ದೇನೆ. ಮನಸ್ಸಲ್ಲಿ ನೋವುಗಳಿವೆ. ಅವುಗಳನ್ನೆಲ್ಲಾ ಹೊರಗಡರ ಹಾಕಲ್ಲ. ರಾಯಚೂರು, ಕಲಬುರಗಿ ಕಡೆಗೆ ಹೋಗಿ ನೋಡಿ ಮುಖ್ಯ ರಸ್ತೆಗಳೇ ಗುಂಡಿಗಳು ಬಿದ್ದಿವೆ. ಆದರೆ ಮಂಡ್ಯ ಕಡೆ ಗ್ರಾಮಗಳ, ಹಳ್ಳಿಗಳ ರಸ್ತೆಗಳಿಗೆ 1,200 ಕೋಟಿ ರೂಪಾಯಿ ಯೋಜನೆ ತಂದಿದ್ದೇವೆ. ಪಕ್ಷ ಕಟ್ಟುವುದಕ್ಕೆ ಹೋರಾಡುತ್ತಿದ್ದೇನೆ ಎಂದು ಬೇಸರದಲ್ಲಿಯೇ ನುಡಿದಿದ್ದಾರೆ. ಇಷ್ಟೆಲ್ಲಾ ಮಾಡ್ತಾ ಇದ್ದರು ಜನ ಒಮ್ಮೆಯಾದರೂ ಆಶೀರ್ವಾದ ಮಾಡಿಲ್ಲ, ಒಮ್ಮೆ ಗೆಲ್ಲಿಸಿ ಅವಕಾಶ ಕೊಡಬೇಕು ಅಲ್ವಾ ಎಂಬ ಅರ್ಥದಲ್ಲಿ ಹೇಳಿದ್ದಾರೆ.

Share This Article