ಬೆಂಗಳೂರು: ಈ ಮೊದಲು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಸಿಎಂ ಬದಲಾವಣೆಯ ಬಗ್ಗೆ ಮಾತನಾಡಿದ್ದರು. ಆಗ ಡಿಸಿಎಂ ಡಿಕೆ ಶಿವಕುಮಾರ್ ಅವರೇ ನೋಟೀಸ್ ನೀಡಿದ್ದರು. ಈಗ ಯತೀಂದ್ರ ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ರೇಸ್ ನಲ್ಲಿದ್ದಾರೆ. ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುವಾಗ ಸತೀಶ್ ಜಾರಕಿಹೊಳಿ ಅವರು ಸಿಎಂ ಆಗಲು ಅರ್ಹರಿದ್ದಾರೆ ಎಂಬ ಮಾತು ಚರ್ಚೆಗೆ ಗ್ರಾಸವಾಗಿದ್ದು, ಸುಮ್ಮನೆ ಮಾತನಾಡುವ ನಮಗೆಲ್ಲಾ ನೋಟೀಸ್ ಕೊಡುವುದಕ್ಕೆ ಆಗುತ್ತೆ. ಅವರಿಗ್ಯಾಕೆ ನೋಟೀಸ್ ಕೊಡ್ತಿಲ್ಲ ಎಂಬ ಮಾತನ್ನ ನೋಟೀಸ್ ಪಡೆದವರು ಕೇಳ್ತಿದ್ದಾರೆ.
ನಮ್ಮಲ್ಲಿ ಗೊಂದಲ ಮಾಡುವುದಕ್ಕೆ ಹೋಗಬೇಡಿ. ನಮ್ಮ ನಾಯಕರಾದ ಸಿದ್ದರಾಮಯ್ಯ ಸಾಹೇಬ್ರಿದ್ದಾರೆ. ತೀರ್ಮಾನ ತೆಗೆದುಕೊಳ್ತಾರೆ. ನೀವೆಲ್ಲಾ ಮಾತನಾಡುವ ಮಟ್ಟಕ್ಕೆ ಹೋಗಬಾರದು. ನಾನ್ ಮಾಡುದ್ರೆ ಬಲತ್ಕಾರ.. ಬೇರೆಯವ್ರು ಮಾಡುದ್ರೆ ಚಮತ್ಕಾರ ಅಂತ ಹೇಳ್ತಾರೆ. ನಾವೆಲ್ಲಾ ಹೇಳಬಾರದು. ಅವರು ತಿದ್ದುಕೊಳ್ತಾರೆ ಅಂದುಕೊಂಡಿದ್ದೀನಿ. ಇವತ್ತು ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಬಂದಿದ್ದೀನಿ. ಅದನ್ನ ನೋಡೋಣಾ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಗಂಗಾ ಬಸವರಾಜ್, ನನಗೆ ನೋಟೀಸ್ ಕೊಟ್ಟಿದ್ದಾರೆ. ನಾನೇನು ಮುಂದಿನ ಮುಖ್ಯಮಂತ್ರಿ ವಿಚಾರ ಮಾತನಾಡಿದ್ದಲ್ಲ ಬರೀ ಮುಖ್ಯಮಂತ್ರಿ ವಿಚಾರ ಮಾತನಾಡಿದ್ದೇ ಅಷ್ಟೆ. ಬಹಳ ಜನಕ್ಕೆ ನೋಟೀಸ್ ಕೊಟ್ಟಿದ್ದಾರೆ. ಇವರಿಗ್ಯಾಕೆ ಕೊಟ್ಟಿಲ್ಲ. ಇದನ್ನ ಹೈಕಮಾಂಡ್ ನೋಡಬೇಕು. ಡಿಸೆಂಬರ್ ನಂತರ ಏನಾಗಬಹುದು ಎಂಬುದನ್ನ ನಾನು ಹೇಳಿ ಆಗಿದೆ. ಎಲ್ಲರೂ ನವೆಂಬರ್ ಕ್ರಾಂತಿ ಅಂತಾರೆ. ಆದರೆ ನಾನು ಡಿಸೆಂಬರ್ ಕ್ರಾಂತಿ ಅಂತ ಹೇಳ್ತೇನೆ. ಅದು ಆಗಿಯೇ ಆಗುತ್ತೆ ನೋಡ್ತಾ ಇರಿ ಎಂದು ಕ್ರಾಂತಿ ಬಾಂಬ್ ಹಾಕಿದ್ದಾರೆ.






