S ಪದ ಉಚ್ಛಾರ ಮಾಡಿದ್ದ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು..!

1 Min Read

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಭಾಷೆಯ ಮೇಲೂ ನೋಡುಗರಿಗೆ ಬೇಸರವಿದೆ. ಈಡಿಯಟ್ ಅಂತಾರೆ, ನೀನೆಲ್ಲಿಂದ ಬಂದಿದ್ದೀಯಾ ಗೊತ್ತು ಅಂತಾರೆ, ಎಸ್ ಪದ ಬಳಕೆ ಮಾಡ್ತಾರೆ. ಅದು ಜಾತಿ ವಿಚಾರದ ಬಗ್ಗೆ ಮಾಡುವ ಉಲ್ಲೇಖ. ಇದೀಗ ಅದೇ ಪದ ಬಳಕೆಯಿಂದಾಗಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.

ರಕ್ಷಿತಾನ ಕಂಡರೆ ಅಶ್ವಿನಿಗೆ ಆಗುವುದೇ ಇಲ್ಲ. ಅದಕ್ಕೆ ಜಾಹ್ನವಿ ಹಾಗೂ ಕಾಕ್ರೋಚ್ ಸುಧಿ ಕೂಡ ಬೆಂಬಲ ಕೊಡ್ತಾ ಇರ್ತಾರೆ. ರಕ್ಷಿತಾ ಮೇಲೆ ಮಾತಿನ ನಡೆಸುವ ಕಾರಣಕ್ಕೆ ಈಗಾಗಲೇ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೂ ಅಶ್ವಿನಿ ಅವರ ನಡವಳಿಕೆಯಲ್ಲೇನು ಕಡಿಮೆಯಾದಂತೆ ಕಾಣಿಸುತ್ತಿಲ್ಲ. ಇದರ ಬೆನ್ನಲ್ಲೇ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.

ಇದೊಂದು ವ್ಯಕ್ತಿತ್ವದ ನಿಂದನೆ ಎಂದು ಆರೋಪಿಸಿ ಅಶ್ವಿನಿ ಗೌಡ ಹಾಗೂ ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದಾರೆ. ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ಎನ್ ಸಿ ಆರ್ ಅಂದ್ರೆ ಗಂಭೀರವಲ್ಲದ ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದಾರೆ. ಅಶ್ವಿನಿ ಗೌಡ ಮನೆಯೊಳಗೆ ರಕ್ಷಿತಾ ಬಗ್ಗೆ ಮಾತನಾಡುವಾಗ, She is S.. ಆ ಕೆಟಗರಿ ನ ಎಂದು ಮಾತನಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ದೂರು ದಾಖಲಾಗಿದೆ.

Share This Article