ಹಾಸನದಲ್ಲಿ ನಡೀತು ಹಾಸನಾಂಬೆಯ ಪವಾಡ : ಕಳೆದೋಗಿದ್ದ ಚಿನ್ನದ ಸರ ಪತ್ತೆ

1 Min Read

 

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆಯ ಶಕ್ತಿ ಅಪಾರವಾದದ್ದು. ಪೂಜೆ ಮಾಡಿ ಬಾಗಿಲು ಹಾಕಿದ್ರೆ ಹೂ ಬಾಡಲ್ಲ, ದೀಪ ಆರಲ್ಲ, ನೈವೇದ್ಯ ಅಳಸಲ್ಲ.. ಈ ವಿಚಾರದಲ್ಲಿಯೇ ದೊಡ್ಡ ಪವಾಡ ಇರಬೇಕಾದ್ರೆ ಭಕ್ತರನ್ನ ಬಿಟ್ಟು ಕೊಡ್ತಾಳ ದೇವಿ. ನಂಬಿ ಬಂದ ಭಕ್ತರ ಕೈ ಬಿಡಲ್ಲ ಅನ್ನೋದು ಇಂದು ಮತ್ತೆ ಸಾಬೀತಾಗಿದೆ.

ಇಂದು ಮೈಸೂರಿನಿಂದ ಬಂದಿದ್ದ ಭಕ್ತೆಯೊಬ್ಬರು ತಾಯಿಯನ್ನು ನೋಡಿ, ಸಂತಸಗೊಂಡರು. ಆದರೆ ಆರು ಲಕ್ಷ ಬೆಲೆ ಬಾಳುವ ಚಿನ್ನದ ಸರವನ್ನ ಕಳೆದುಕೊಂಡು ಬಿಟ್ಟರು. ಹುಡುಕಾಡಿದ್ರು ಸಿಗಲಿಲ್ಲ. ಆರು ಲಕ್ಷ ಬೆಲೆ ಬಾಳುವ ಚಿನ್ನದ ಸರ ಅಂದ್ರೆ ಸುಮ್ನೆನಾ ಅದರಲ್ಲೂ ಈಗಿನ ಚಿನ್ನದ ಬೆಲೆಯಲ್ಲಿ ತೆಗೆದುಕೊಳ್ಳುವುದಾದರೂ ಹೇಗೆ. ಆ ಆತಂಕವೂ ಆ ಮಹಿಳೆಗೆ ಹೆಚ್ಚಾಗಿದೆ.

ಚಿನ್ಬದ ಸರ ಕಳೆದುಕೊಂಡ ನೋವಲ್ಲಿ ಯಾಕಾದ್ರೂ ಇಲ್ಲಿಗೆ ಬಂದೆನೊ. ಬರದಿದ್ದಿದ್ರೆ ಚೆನ್ನಾಗಿ ಇರ್ತಾ ಇತ್ತು ಅಂದ್ಕೊಂಡಿದ್ದಾರೆ. ತಾಯಿ ಭಕ್ತರ ಕೈ ಬಿಡುವುದುಂಟು. ಆ ಸರ ಅಲ್ಲೇ ಒಬ್ಬ ಒಳ್ಳೆ ವ್ಯಕ್ತಿ ಕೈಗೆ ಸಿಕ್ಕಿದೆ. ಅದನ್ನ ಸೀದಾ ತೆಗೆದುಕೊಂಡು ಹೋಗಿ ಪೊಲೀಸರ ಬಳಿ ಕೊಟ್ಟಿದ್ದಾನೆ. ತಕ್ಷಣ ಪೊಲೀಸರು ಮೈಕ್ ನಲ್ಲಿ ಅನೌನ್ಸ್ ಮಾಡಿದ್ದಾರೆ. ಅಲ್ಲಿಗೆ ಬಂದ ಮಹಿಳೆ ಸರ ನನ್ನದೆ ಎಂದಾಗ, ಒಂದಷ್ಟು ಪ್ರಶ್ನೆಗಳ ಕೇಳಿ, ಸರದ ಬಗ್ಗೆ ಸರಿಯಾಗಿ ಮಾಹಿತಿ ಪಡೆದು, ಆ ಮಹಿಳೆಯದ್ದೇ ಎಂಬುದನ್ನ ಖಾತರಿ ಪಡಿಸಿಕೊಂಡು ನೀಡಿದ್ದಾರೆ. ಸರ ತಂದುಕೊಟ್ಟ ಆ ವ್ಯಕ್ತಿಗೂ ಧನ್ಯವಾದ ತಿಳಿಸಿದ್ದಾರೆ. ತಾಯಿ ಸನ್ನಿಧಾನದಲ್ಲಿ ಮತ್ತೊಮ್ಮೆ ತಾಯಿಗೆ ಕೈ ಮುಗಿದು ಆ ಮಹಿಳೆ ಹೋಗಿದ್ದಾರೆ.

Share This Article