ಹಾಸನ: ಹಾಸನಾಂಬೆಯನ್ನು ನೋಡಲು ಇಷ್ಟು ದಿನ ಬಂದ ಜನವೇ ಬೇರೆ ಇನ್ಮೇಲೆ ಬರುವ ಜನರೇ ಬೇರೆ. ಯಾಕಂದ್ರೆ ಮೂರು ದಿನಗಳ ಕಾಲ ದೀಪಾವಳಿ ರಜೆ ಇದೆ. ಹೀಗಾಗಿ ದೇವಸ್ಥಾನಕ್ಕೆ ಹೋಗುವವರ ಸಂಖ್ಯೆ ಜಾಸ್ತಿಯಾಗುತ್ತೆ. ಹೀಗಾಗಿ ಸರಿಯಾದ ವ್ಯವಸ್ಥೆಗೆ ಜಿಲ್ಲಾಧಿಕಾರಿ ಲತಾ ಕುನಾರಿಗೆ, ಎಸ್ಪಿ ಮೊಹಮ್ಮದ್ ಸುಜೀತಾ ಪತ್ರ ಬರೆದಿದ್ದಾರೆ.
ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದಾರೆ. ರಸ್ತೆಯವರೆಗೂ ಭಕ್ತರ ಸರತಿ ಸಾಲು ಬಂದು ನಿಂತಿದೆ. ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳವಕಾಶ ಕಡಿಮೆ ಇದೆ. ದೀಪಾವಳಿ ಹಬ್ಬದ ರಜೆ ಇರುವ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ನೂಕು ನುಗ್ಗಲು ಉಂಟಾಗಿ ಅಹಿತಕರ ಘಟನೆ ಸಂಭವಿಸಬಹುದು. ಭಕ್ತರನ್ನು ನಿಯಂತ್ರಿಸಲು ಕ್ರಮ ವಹಿಸದೇ ಇದ್ದಲ್ಲಿ ಅಹಿತಕರ ಘಟನೆ ಸಂಭವಿಸಿದರೆ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂದು ಹಾಸನಾಂಬೆಯ ದರ್ಶನ ಪಡೆಯಲು ಸಾವಿರಾರು ಮಂದಿ ಬಂದಿದ್ದಾರಡ. ಈ ಬಾರಿ ವಿಐಪಿ, ವಿವಿಐಪಿ ಪದ್ಧತಿಯನ್ನ ಕೈಬಿಡಲಾಗಿದೆ. ಬದಲಿಗೆ ಸಾವಿರ ರೂಪಾಯಿಯ ಕ್ಯೂ ಇದೆ. ಅದರಲ್ಲಿಯೇ ಸಾಕಷ್ಟು ಜನ ಹೋಗ್ತಾ ಇದಾರೆ. ಅದರಲ್ಲೂ ರಜೆ ಇರುವ ಕಾರಣ ಸಂಖ್ಯೆ ಹೆಚ್ಚಾಗಿದೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕೊಡುವ ಹಾಸನಾಂಬೆ ತಾಯಿಯನ್ನು ನೋಡಲು ಬೇರೆ ಬೇರೆ ರಾಜ್ಯದಿಂದಾನೂ ಜನ ಬರ್ತಾರೆ. ಹಾಸನಾಂಬೆಯ ಸನ್ನಿಧಾನದಲ್ಲಿ ಹಬ್ಬದ ವಾತಾವರಣವೇ ಮನೆ ಮಾಡಿದೆ. ಪೊಲೀಸರು ಕೂಡ ಇಷ್ಟು ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ. ಆದರೆ ಇನ್ಮೇಲೆ ಇನ್ನಷ್ಟು ಸೌಲಭ್ಯ ಬೇಕಾಗಿರುವ ಕಾರಣ ಪತ್ರ ಬರೆದಿದ್ದಾರೆ.




