ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಮೊಬೈಲ್ ಸಂಖ್ಯೆ : 94483 38821
ಪ್ರಪಂಚದಲ್ಲಿ ಮೊಟ್ಟಮೊದಲಿಗೆ ವಜ್ರಗಳ ನಿಕ್ಷೇಪವನ್ನು 4ನೇ ಶತಮಾನದ ಬಿ.ಸಿ.ಯಲ್ಲಿ ಪತ್ತೆಹಚ್ಚಲಾಗಿದೆ. ಇದು ಕಾರ್ಬನ್ (ಇಂಗಾಲ) ಅಂಶದಿಂದ ರಚನೆಯಾಗಿದೆ.

ವಜ್ರಗಳ ನಿಕ್ಷೇಪವನ್ನು ಭೂಮಿಯ ಅಂತರಾಳದಿಂದ ಎತ್ತಿತಂದಿರುವುದು ಜ್ವಾಲಾಮುಖಿಗಳು, ವಜ್ರ ಉಂಟಾಗಲು ಭೂಮಿಯೊಳಗೆ 14000ಸೆ. ಉಷ್ಣತೆಬೇಕು. ಹಾಗೆಯೇ 5500ಪ್ಯಾಸ್ಕಲ್ ವಾಯುಭಾರ ಒತ್ತಡವಿರಬೇಕು. ವಿಶ್ವದಲ್ಲಿ ಖನಿಜಗಳಲ್ಲಿ ಅತಿಹೆಚ್ಚಿನ ಗಡುಸಾದ ವಸ್ತು ವಜ್ರವೆಂದು ವೈಜ್ಞಾನಿಕವಾಗಿ ಹೆಸರಿಸಲಾಗಿದೆ.
ದಕ್ಷಿಣ ಆಫ್ರಿಕಾದ ಕಿಂಬರ್ಲಿ ಎಂಬುದು ಹೆಸರಾಂತ ವಜ್ರಗಳ ನಿಕ್ಷೇಪಗಳು ಇರುವ ಸ್ಥಳ. ಕಿಂಬರ್ಲಿ ನಾರ್ದರ್ನ್ ಕೇಫ್ ಫ್ರಾವಿನ್ಸ್ನ ರಾಜಧಾನಿ. 1871-1914ರ ನಡುವೆ 17 ಎಕರೆ ಪ್ರದೇಶದಲ್ಲಿ 240 ಮೀ. ಕೆಳಕ್ಕೆ ಗುಂಡಿ ತೋಡಿದಾಗ ಅಲ್ಲಿ ಸುಮಾರು 2722 ಕೆ.ಜಿ. ವಜ್ರದ ಹರಳುಗಳು ಪತ್ತೆಯಾಗಿದೆ. ನಂತರ 1097 ಮೀ. ಆಳದ ವರೆಗೆ ವಜ್ರದ ನಿಕ್ಷೇಪಣೆ ಗಣಿ ಗಣಿಗಾಗಿಕೆ ಮಾಡಲಾಗಿದೆ. ಇಲ್ಲಿ ವಜ್ರದ ಹರಳುಗಳು ನೆಲದಾಳದಿಂದ ಮೇಲಕ್ಕೆ ಎತ್ತಿ ತಂದಿರುವುದು ಜ್ವಾಲಾಮುಖಿಗಳಿಂದೇ, ಇದನ್ನು ತಾಂತ್ರಿಕವಾಗಿ ಪೈಪ್ ಎನ್ನಲಾಗಿದೆ. ಇಂತಹ ಶಿಲೆಗಳನ್ನು ಕಿಂಬರ್ಲ್ಲೈಟ್ ಎಂದು ಕರೆಯಲಾಗಿದೆ. ಭೂಚಿಪ್ಪಿಗೂ, ಭೂಕವಚಕ್ಕೂ ಸಂಪರ್ಕವಿರುವ ಕೊಳವೆಗಳ ಮೂಲಕ ವಜ್ರದ ಹರಳುಗಳು ಮೇಲೇರಿ ಬಂದಿರುತ್ತದೆ.
ಭಾರತ ದೇಶದ ಉತ್ತರಪ್ರದೇಶ, ಚತ್ತೀಸ್ ಘಡ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಭಾಗದಲ್ಲಿ ನಿಕ್ಷೇಪಗಳ ಸಮೀಕ್ಷೆ ನಡೆದು ಭೂವೈಜ್ಞಾನಿಕವಾಗಿ ಗುರುತಿಸಲಾಗಿದೆ. ನಮ್ಮ ದೇಶದಲ್ಲಿ ಪ್ರಮುಖವಾಗಿ ಬಂಡೂರು ಪ್ರಾಜೇಕ್ಟ್, ಪನ್ನ, ಗೋಲ್ಕಂಡ ಮತ್ತು ಕೊಲ್ಲೂರಿನಲ್ಲಿ ವಜ್ರದ ಗಣಿಗಾರಿಕೆ ನಡೆಯುತ್ತಿದೆ. ಕರ್ನಾಟಕದಲ್ಲಿ ರಾಯಚೂರು ಮತ್ತು ಗುಲ್ಬಾರ್ಗ ಜಿಲ್ಲೆಯ ಆಂಧ್ರಪ್ರದೇಶದ ಗಡಿಭಾಗದಲ್ಲಿ ವಜ್ರದ ನಿಕ್ಷೇಪವಿರುವುದಾಗಿ ಅನ್ವೇಷಣೆಯಿಂದ ತಿಳಿದುಬಂದಿದೆ.
ಐ.ಬಿ.ಎಂ./ಎನ್.ಎಂ.ಐ. ವರದಿ ಪ್ರಕಾರ ಭಾರತ ದೇಶದಲ್ಲಿ ಒಟ್ಟು 31.83 ಮಿಲಿಯನ್ ಕ್ಯಾರೇಟ್ ನಷ್ಟು ವಜ್ರದ ಲಭ್ಯವಿದೆ ಎಂದು ಭೂವೈಜ್ಞಾನಿಕವಾಗಿ ದೃಢಪಟ್ಟಿದೆ. ವಿಶ್ವವಿಖ್ಯಾತ ವಜ್ರಗಳು 16 ರಿಂದ 19ನೇ ಶತಮಾನದ ಮಧ್ಯದವರೆಗೆ ಆಂಧ್ರಪ್ರದೇಶದ ಕೃಷ್ಣ ನದಿಯ ಮೆಕ್ಕಲಲ್ಲಿ ವಜ್ರಗಳನ್ನು ಆರಿಸಿ ತೆಗೆಯುವ ಉಧ್ಯಮ ವಿಶ್ವ ಪ್ರಸಿದ್ಧಿಗಳಿಸಿದೆ.
ಉತ್ತಮ ಗುಣಮಟ್ಟದ ವಜ್ರಗಳನ್ನು ಅಲಂಕಾರ ಆಭರಣಗಳಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಗಡಸತ್ವ ಹೆಚ್ಚಾಗಿರುವುದರಿಂದ ವಜ್ರವನ್ನು ಗ್ಲಾಸ್ ಕತ್ತರಿಸುವಲ್ಲಿ ಪಾಲಿಶ್ ಮಾಡುವ ಉಧ್ಯಮಗಳಲ್ಲಿ ಉಪಯೋಗಿಸಲಾಗಿತ್ತಿದೆ ಹಾಗೂ ಕಲ್ಲು-ಬಂಡೆಗಳನ್ನು ಕೊರೆಯುವ ಯಂತ್ರಗಳಲ್ಲಿ ಇದನ್ನು ಉಪಯೋಗಿಸಲಾಗುತ್ತಿದೆ.






