ಪಾಶ್ರ್ವನಾಥ ಶಾಲೆಯಲ್ಲಿ ಮಕ್ಕಳಿಂದ ದೀಪಾವಳಿ ಆಚರಣೆ

1 Min Read

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಆ. 18 : ನಗರದ ಪಾಶ್ರ್ವನಾಥ ವಿದ್ಯಾಸಂಸ್ಥೆವತಿಯಿಂದ ಶನಿವಾರ ಶಾಲಾ ಆವರಣದಲ್ಲಿ ದೀಪಾವಳಿ ಹಬ್ಬವನ್ನು ಮಕ್ಕಳ ಸಮ್ಮುಖದಲ್ಲಿ ಆಚರಣೆಯನ್ನು ಮಾಡಲಾಯಿತು.

ಈ ಸಮಯದಲ್ಲಿ ಸುಮಾರು 1500 ದೀಪಗಳನ್ನು ಹಚ್ಚುವುದರ ಮೂಲಕ ದೀಪಾವಳಿಯನ್ನು ಆಚರಣೆ ಮಾಡಲಾಯಿತು.

ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಶಾಲಾ ಆಧ್ಯಕ್ಷರಾದ ಬಾಬುಲಾಲ್ ಪೈಯಾದ್ ದೀಪವನ್ನು ಹಚ್ಚುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಈ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವಾಗಿ ಆಚರಣೆಯನ್ನು ಮಾಡಿ, ಹೆಚ್ಚಾಗಿ ಶಬ್ದವನ್ನು ಮಾಡುವಂತ ಹಾಗೂ ಹೆಚ್ಚಾಗಿ ಮಾಲಿನ್ಯವನ್ನು ಉಂಟು ಮಾಡುವಂತ ಪಟಾಕಿಗಳನ್ನು ಹಚ್ಚ ಬೇಡಿ ಇದರಿಂದ ನಮ್ಮ ಪರಿಸರಕ್ಕೆ ಹಾನಿಯಾಗುವುದ್ದಲ್ಲದೆ ನಮ್ಮ ಸುತ್ತಾ-ಮುತ್ತಲ್ಲಿನ ಪ್ರಾಣಿ ಪಕ್ಷಿಗಳಿಗೂ ಸಹಾ ತೊಂದರೆಯಾಗಲಿದೆ ಅವುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಮಕ್ಕಳು ಪಟಾಕಿಯನ್ನು ಹಚ್ಚುವಾಗ ಪೋಷಕರ ಸಹಾಯವನ್ನು ಪಡೆಯಿರಿ ನೀವೇ ಪಟಾಕಿಯನ್ನು ಹಚ್ಚುವಂತ ಕಾರ್ಯಕ್ಕೆ ಹೋಗಬೇಡಿ ಈ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಣೆಯನ್ನು ಮಾಡಿ ಎಂದು ಮಕ್ಕಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಸುರೇಶ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶಾಂತ ಕುಮಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯರಾದ ನಾಜೀಮಾ ಸ್ವಾಲೇಹ, ಪ್ರೌಢ ಶಾಲಾ ಮುಖ್ಯಸ್ಥರಾದ ಜನಕರೆಡ್ಡಿ, ಶಾಲೆಯ ಆಡಳಿತ ಮಂಡಳಿ, ಭೋದಕ ಹಾಗೂ ಭೋದಕೇತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ದೀಪಾವಳಿಯ ಹಬ್ಬದ ಅಂಗವಾಗಿ ದೀಪದ ಹಾಡುಗಳಿಗೆ ನೃತ್ಯವನ್ನು ಮಾಡಿದರು.

Share This Article
Enable Notifications OK No thanks