ಹಾಸನ : ವರ್ಷಕ್ಕಿಮ್ಮೆ ದರ್ಶನ ಭಾಗ್ಯ ಕೊಡುವ ಹಾಸನಾಂಬೆಯನ್ನು ನೋಡಲು ಪ್ರತಿದಿನ ಸಾವಿರಾರು ಭಕ್ತರು ಬರ್ತಾನೇ ಇರ್ತಾರೆ. ಈಗಾಗಲೇ ಲಕ್ಷಾಂತರ ಭಕ್ತರು ಅಮ್ಮನ ದರ್ಶನ ಭಾಗ್ಯವನ್ನ ಪಡೆದುಕೊಂಡಿದ್ದಾರೆ. ಈ ಮೂಲಕ ಒಂದೇ ವಾರದಲ್ಲಿ ತಾಯಿಯ ಹುಂಡಿಯಲ್ಲಿ ಕೋಟ್ಯಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಈ ಮೂಲಕ ಭಕ್ತರ ಕಾಣಿಕೆ ವಿಚಾರದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ.
ಇಲ್ಲಿಯವರೆಗೂ 15,30,000 ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಕೇವಲ ಎಂಟೇ ದಿನದಲ್ಲಿ ದೇವಾಲಯಕ್ಕೆ 10.5 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಇನ್ನೂ ಐದು ದಿನಗಳ ಕಾಲ ಹಾಸನಾಂಬೆಯ ಜಾತ್ರಾ ನಡೆಯಲಿದೆ. ಈ ಮೂಲಕ ಹಾಸನಾಂಬೆ ದರ್ಶನಕ್ಕೆಂದು ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದು, ಕಾಣಿಕೆ ಮತ್ತಷ್ಟು ಸಂಗ್ರಹವಾಗಲಿದೆ. ಹಾಸನಾಂಬೆಯ ದರ್ಶನಕ್ಕೆ ಪ್ರತಿ ವರ್ಷವೂ ವಿಐಪಿ, ವಿವಿಐಪಿ ದರ್ಶನದ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಆ ವ್ಯವಸ್ಥೆಗೆ ಬ್ರೇಕ್ ಬಿದ್ದಿದೆ. ವಿಐಪಿ, ವಿವಿಐಪಿ ಪಾಸ್ ಗಳನ್ನ ನೀಡಿಲ್ಲ. ಹೀಗಾಗಿ ಹೆಚ್ಚಿನ ಜನ ಸಾವಿರದ ಟಿಕೆಟ್ ಕ್ಯೂ ನಲ್ಲಿಯೇ ಸಾಗಿದ್ದಾರೆ. ಈ ಕಾರಣಕ್ಕೂ ಕಾಣಿಕೆ ಸಂಗ್ರಹದಲ್ಲಿ ಹೆಚ್ಚಾಗಿರಬಹುದು. ಒಟ್ನಲ್ಲಿ ಈ ವರ್ಷ ಕಡಿಮೆ ಸಮಯದಲ್ಲಿ ಹತ್ತು ಕೋಟಿ ಕಾಣಿಕೆ ಸಂಗ್ರಹವಾಗಿರುವುದು ಇತಿಹಾಸದಲ್ಲಿಯೇ ದಾಖಲೆಯ ದಿನವೇ ಸರಿ.
ಹಾಸನಾಂಬೆ ದರ್ಶನ ಮಾಡಲು ಸಾಮಾನ್ಯರು, ಸೆಲೆಬ್ರೆಟಿಗಳು, ರಾಜಕಾರಣಿಗಳು ಸರತಿ ಸಾಲಿನಲ್ಲಿ ಬರುತ್ತಿದ್ದಾರೆ. ತಾಯಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ವರ್ಷವಿಡೀ ದೇಗುಲದ ಬಾಗಿಲು ಹಾಕಿದ್ರು ಹೂ ಬಾಡಲ್ಲ, ದೀಪ ಆರಲ್ಲ ಇದು ತಾಯಿಯ ಪವಾಡ.






