.ನವದೆಹಲಿ: ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷಗಳು ಜನರನ್ನ ಸೆಳೆಯಲು ಆರಂಭಿಸಿವೆ. ದೆಹಲಿ ಸರ್ಕಾರ ಇದೀಗ ಮತ್ತೊಮ್ಮೆ ಅಧಿಕಾರ ಕೊಟ್ರೆ ಉಚಿತ ಕರೆಂಟ್ ಜೊತೆಗೆ, ಪ್ರತಿ ತಿಂಗಳು ಮಹಿಳೆಯರಿಗೆ 1 ಸಾವಿರ ಹಣ ನೀಡೋದಾಗಿ ಭರವಸೆ ನೀಡಿದೆ.
ಈಗಾಗಲೇ ಚುನಾವಣಾ ಆಯೋಗದಿಂದ ಪಂಚರಾಜ್ಯಗಳ ಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ಹೀಗಾಗಿ ಆ್ಯಪ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಕಸರತ್ತು ಶುರುವಾಗಿದೆ. ಮೊಹಾಲಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜನರಿಗೆ ಹೊಸ ಆಶ್ವಾಸನೆ ನೀಡಿದ್ದಾರೆ.
ಪಂಜಾಬ್ ರಾಜ್ಯವನ್ನ ಸಮೃದ್ಧಗೊಳಿಸಲು ಮುಂದಿನ ಐದು ವರ್ಷವೂ ಶ್ರಮ ಹಾಕುತ್ತೇವೆ. ಎಲ್ಲರಿಗೂ ಉದ್ಯೋಗ ಅವಕಾಶ ನೀಡಿತ್ತೇವೆ. ಪಂಜಾಬ್ ನಲ್ಲಿ ಆ್ಯಪ್ ಅಧಿಕಾರಕ್ಕೆ ಬಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಂದು ಹೆಣ್ಣು ಮಗಳಿಗೂ ತಿಂಗಳಿಗೆ ಸಾವಿರ ರೂಪಾಯಿ ಹಣ ನೀಡುತ್ತೇವೆ. ಭ್ರಷ್ವನ್ನು ಕೊನೆಗೊಳ್ಳಿಸುತ್ತೇವೆ. ಮೊಹಲ್ಲಾದಲ್ಲಿ 16 ಸಾವಿರ ಕ್ಲಿನಿಕ್ ಗಳನ್ನ ತೆರೆಯುತ್ತೇವೆ. ಪ್ರತಿ ಪಂಜಾಬಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.