Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪುಷ್ಪ ಸಿನಿಮಾ ಸ್ಪೂರ್ತಿ ಆಯ್ತಾ ಆ ಪೊಲೀಸರಿಗೆ..? ಸ್ಮಗ್ಲಿಂಗ್ ಮಾಲ್ ನ್ನ ಏನ್ ಮಾಡಿದ್ರು ಗೊತ್ತಾ..?

Facebook
Twitter
Telegram
WhatsApp

ಬೆಂಗಳೂರು: ಸಿನಿಮಾಗಳನ್ನ ಮನರಂಜನೆಗೆ ನೋಡಬೇಕು. ಒಳ್ಳೆ ಸಂದೇಶಗಳಿದ್ದರೆ ಅದನ್ನ ಅನುಕರಣೆ ಮಾಡಬೇಕು ಎಂಬ ಕಾಲ ಹೋಯ್ತು. ಸ್ಪೂರ್ತಿ ಪಡೆದು ಒಳ್ಳೆಯ ಕೆಲಸಗಳನ್ನ ಮಾಡೋದಲ್ಲ, ಸಿನಿಮಾದಿಂದ ಸ್ಪೂರ್ತಿ‌ ಪಡೆದು ಕಳ್ಳತನ ಹೇಗೆ ಮಾಡೋದು ಅಂತಾನು ಕೆಲವೊಬ್ರು ನೋಡ್ತಾರೆ. ಇದೀಗ ಇಲ್ಲೊಂದಿಬ್ರು ಪೊಲೀಸರು ಥೇಟ್ ಪುಷ್ಟ ಸಿನಿಮಾದಲ್ಲೇ ನಡೆದ ಘಟನೆಯನ್ನ ಮರುಕಳಿಸಲು ಯತ್ನಿಸಿ ಈಗ ಅಮಾನತ್ತಾಗಿದ್ದಾರೆ.

ಮಮತೇಶ್ ಗೌಡ ಹಾಗೂ ಮೋಹನ್ ಎಂಬಿಬ್ಬರು ಸಿನಿಮಾವನ್ಮ ಅನುಕರಣೆ ಮಾಡಲು ಹೋಗಿ ಈಗ ಕಾಣದಂತೆ ತಪ್ಪಿಸಿಕೊಂಡಿದ್ದಾರೆ. ಈ ಇಬ್ಬರು ವೃತ್ತಿಯಲ್ಲಿ ಕಾನ್ಸ್‌ಟೇಬಲ್ ಆಗಿದ್ದವರು. ಈ ಮುಂಚೆ ಸಿಸಿಬಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರನ್ನ ವರ್ಗಾವಣೆ ಮಾಡಲಾಗಿತ್ತು. ಇವರಿಬ್ಬರಿಗೂ ಗಂಧದ ಸ್ಮಗ್ಲಿಂಗ್ ಹಾಗೂ ಸ್ಲಗ್ಲರ್ ಗಳ ಬಗ್ಗೆ ಚೆನ್ನಾಗಿ ಅರಿವಿತ್ತು.

ಹೀಗಾಗಿ ಮಾಲತೇಶ್ ಹಾಗೂ ಮೋಹನ್ ಸೇರಿ ಚಿಂತಾಮಣಿಯಿಂದ ಬರ್ತಿದ್ದಂತ ರಕ್ತಚಂದನ ತುಂಬಿದ್ದಂತ ಟಾಟಾ ಏಸ್ ಅಡ್ಡಗಟ್ಟಿ, ಚಾಲಕನಿಗೆ ಹಲ್ಲೆ ಮಾಡಿ, ವಾಹನ ವಶಪಡೆದಿದ್ದಾರೆ. ಪ್ರಕರಣ ನಡರದ ಐದು ದಿನಗಳ ಬಳಿಕ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ರು.

ಆ ಬಳಿಕ ಎಚ್ಚೆತ್ತ ಪೊಲೀಸರಿಗೆ ಹೊಸಕೋಟೆ ಪೊಲೀಸರು ಯಾವುದೇ ದಾಳಿ ನಡೆಸಿಲ್ಲ ಎಂಬುದು ಗೊತ್ತಿತ್ತು. ಸ್ಥಳೀಯರು ನೀಡಿದ ದೂರು, ಸ್ವಿಪ್ಟ್ ಕಾರು, ಟಾಟಾ ಏಸ್, ಸಿಸಿಟಿವಿ ಫೂಟೇಜ್ ಎಲ್ಲವನ್ನು ಪರಿಶೀಲನೆ ನಡೆಸುತ್ತಿದ್ದರು. ತನಿಖೆ ನಡೆಯುತ್ತಿರುವ ಗೊತ್ತಾದ ಬೆನ್ನಲ್ಲೇ ಮಮತೇಶ್ ಹಾಗೂ ಮೋಹನ್ ಎಸ್ಕೇಪ್ ಆಗಿದ್ದಾರೆ. ಸದ್ಯ ಅವರಿಬ್ಬರ ನಾಪತ್ತೆಯಿಂದ ಅವರೇ ಆರೋಪಿಗಳು ಅನ್ನೋ ಅನುಮಾನ ಹುಟ್ಟಿದರ. ಸದ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತೆ ನ್ಯಾಯಾಂಗ ಬಂಧನಕ್ಕೆ..!

ಬೆಂಗಳೂರು: ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರಿಗೆ ಮತ್ತೆ ನ್ಯಾಯಾಂಗ ಬಂಧನವಾಗಿದೆ. ರೇವಣ್ಣ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಲಯ ಮಹತ್ವದ ಆದೇಶವನ್ನು ಹೊರಡಿಸಿದೆ. ಕಿಡ್ನ್ಯಾಪ್ ಕೇಸ್

ತುರುವನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರಿಗೆ ಬೆಳೆವಿಮೆ ಹಣವನ್ನು ಖಾತೆಗೆ ಜಮಾಮಾಡುವಂತೆ ಒತ್ತಾಯಿಸಿ ರೈತರ ಮನವಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ,ಮೇ.08 : ತಾಲ್ಲೂಕಿನ ತುರುವನೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬೆಳೆ ವಿಮೆಯ ಕಟ್ಟಿದ ರೈತರಿಗೆ ವಿಮಾ ಕಂಪನಿಯವರು

ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ವಿಧಾನ ಪರಿಷತ್‍ನಲ್ಲಿ ಶಿಕ್ಷಕರ ಪರವಾಗಿ ಹೋರಾಟ : ಲೋಕೇಶ್ ತಾಳಿಕಟ್ಟೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817   ಸುದ್ದಿಒನ್, ಚಿತ್ರದುರ್ಗ,ಮೇ.08 : ಶಿಕ್ಷಕರುಗಳಿಗೆ ಓಪಿಎಸ್ ಅಥವಾ ಪಿಂಚಣಿಯನ್ನು ಕೊಡಿಸುವುದು. ಕಾಲ್ಪನಿಕ ವೇತನವನ್ನು ಕೊಡಿಸುವುದು. ಬಡ್ತಿ ಪಡೆದ ಶಿಕ್ಷಕರಿಗೆ

error: Content is protected !!