ಬೆಂಗಳೂರು: ದರ್ಶನ್ ಗೆ ಬೆನ್ನು ನೋವು ಇರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಜೈಲಿನಲ್ಲಿ ಯಾವುದೇ ರೀತಿಯ ಸೌಲಭ್ಯ ಸಿಕ್ತಾ ಇಲ್ಲ ಅಂತ ದರ್ಶನ್ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಕೂಡ ಹಾಸಿಗೆ, ದಿಂಬು ಕೊಡುವುದಕ್ಕೆ ಅನುಮತಿಯನ್ನು ನೀಡಿತ್ತು. ಆದರೂ ಸೌಲಭ್ಯ ನೀಡದೆ ಇದ್ದಾಗ ಮತ್ತೆ ಕೋರ್ಟ್ ಮೊರೆ ಹೋಗಿದ್ದ ದರ್ಶನ್ ಪರ ವಕೀಲರು ಅಧಿಕಾರಿಗಳನ್ನು ಕಳುಹಿಸಿ, ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರು.
ಈ ಬೆನ್ನಲ್ಲೇ ಕೋರ್ಟ್ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದ್ದಾರೆ. ವರದರಾಜು ತಂಡ ಜೈಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ದರ್ಶನ್ ಗೆ ನಿಯಮಾವಳಿ ಅನುಸಾರ ಸೌಲಭ್ಯ ನೀಡಲಾಗಿದೆಯಾ..? ಕೋರ್ಟ್ ಆದೇಶ ಹಾಗೂ ಜೈಲಿನ ಮ್ಯಾನ್ಯುವಲ್ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ ಆದೇಶವನ್ನೇನಾದರೂ ಜೈಲು ಅಧಿಕಾರಿಗಳು ಉಲ್ಲಂಘಟನೆ ಮಾಡಿದ್ದಾರಾ ಎಂಬುದನ್ನ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಕ್ಟೋಬರ್ 18 ರ ಒಳಗೆ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಕೆ ಮಾಡಲಾಗುತ್ತದೆ.
ಇದರ ನಡುವೆ ದರ್ಶನ್ ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಜೈಲಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಸಿವಿ ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರಿಂದ ಫಿಸಿಯೋಥೆರಪಿ ಟ್ರೀಟ್ಮೆಂಟ್ ಮಾಡಿದ್ದಾರೆ. ಜೈಲಿನಲ್ಲಿ ನೆಲದ ಮೇಲೆ ಮಲಗುವುದರಿಂದ ಮತ್ತೆ ಮೊಣಕೈ ನೋವು ಶುರುವಾಗಿದ್ದು, ಅದಕ್ಕೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಾರು ಅಪಘಾತವಾದಾಗ ಮೊಣಕೈಗೆ ಪೆಟ್ಟು ಬಿದ್ದಿತ್ತು. ಆಗ ಶಸ್ತ್ರಚಿಕಿತ್ಸೆಯೂ ಆಗಿತ್ತು. ಈ ವೇಳೆ ಕೈಗೆ ರಾಡ್ ಕೂಡ ಹಾಕಲಾಗಿತ್ತು. ಈಗ ನೋವು ಹೆಚ್ಚಾಗಿದರ, ಎರಡು ಬೆರಳು ಮರಗಟ್ಟಿದೆ ಎನ್ನಲಾಗ್ತಾ ಇದೆ.






