ನವೆಂಬರ್ ಕ್ರಾಂತಿ ಕಾಂಗ್ರೆಸ್ ನಲ್ಲಿ ಮಾತ್ರವಲ್ಲ, ಬಿಜೆಪಿಯಲ್ಲೂ ಆಗುತ್ತೆ : ಮತ್ತೆ ಕ್ರಾಂತಿ ಕಿಡಿಹೊತ್ತಿಸಿದ ರಾಜಣ್ಣ

1 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಕ್ರಾಂತಿ ವಿಚಾರ ದೊಡ್ಡಮಟ್ಟಕ್ಕೆ ಸದ್ದು ಮಾಡಿತ್ತು. ಅದು ರಾಜಣ್ಣ ಕ್ರಾಂತಿ ವಿಚಾರ ತೆಗೆದ ಮೇಲೆನೆ. ಸೆಪ್ಟೆಂಬರ್ ಕ್ರಾಂತಿ, ನವೆಂಬರ್ ಕ್ರಾಂತಿ ಬಗ್ಗೆ ಮಾತನಾಡಿದ್ದರು. ಸೆಪ್ಟೆಂಬರ್ ಕ್ರಾಂತಿ ಅಂತು ಆಗ್ಲಿಲ್ಲ, ನವೆಂಬರ್ ಕ್ರಾಂತಿಯಾಗುತ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇದೀಗ ರಾಜಣ್ಣ ಅದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ.

ನವೆಂಬರ್ ಕ್ರಾಂತಿ ಅಂದ್ರೆ ಕಾಂಗ್ರೆಸ್ ನಲ್ಲಿ ಮಾತ್ರ ಅಂತ ಯಾಕೆ ತಿಳಿದುಕೊಳ್ಳುತ್ತೀರಾ..? ಬಿಜೆಪಿಯಲ್ಲೂ ಕ್ರಾಂತಿಯಾಗಬಹುದು. ಬಿಜೆಪಿಯವರ ವಿರುದ್ಧ ಎಷ್ಟು ಜನ ಇದ್ದಾರೆ. ವಿಜಯೇಂದ್ರ ಅವರನ್ನು ತೆಗೆಯಬೇಕು ಅಂತ ಒಂದು ದೊಡ್ಡ ಗುಂಪೆ ಇದೆ. ಈಗ ವಿಜಯೇಂದ್ರ ಅವರನ್ನ ತೆಗೆದ್ರೆ ಯಡಿಯೂರಪ್ಪ ಅವರು ಸುಮ್ನೆ ಇರ್ತಾರಾ..? ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ, ಜೆಡಿಎಸ್ ಗೆ ದೇವೇಗೌಡರು ಅನಿವಾರ್ಯ ಹಾಗೇ ಕಾಂಗ್ರೆಸ್ ಗೆ ಸಿದ್ದರಾಮಯ್ಯ ಅನಿವಾರ್ಯ. ಹೀಗಾಗಿ ನಾಯಕರು ಎಲ್ಲವನ್ನು ನೋಡಿಕೊಂಡು ಮಾಡಬೇಕು ಎಂದಿದ್ದಾರೆ.

ಇದೇ ವೇಳೆ ಸಿಎಂ ಸ್ಥಾನದ ಬಗ್ಗೆ ಮಾತನಾಡಿ, ಎಲ್ಲವನ್ನು ಎಐಸಿಸಿ ತೀರ್ಮಾನ ಮಾಡಬೇಕು. ಯಾರನ್ನಾದರೂ ಒಬ್ಬರನ್ನ ನೇಮಿಸಿ, ಎಂಎಲ್ಎ ಗಳಿಂದ ಅಭಿಪ್ರಾಯ ಸಂಗ್ರಹಿಸಿ ಬಳಿಕ ಯಾರನ್ನ ಸಿಎಂ ಮಾಡಬೇಕು ಅಂತ ಅವರು ಯೋಚನೆ ಮಾಡಬೇಕು. ಅದಕ್ಕೆ ಈ ಬಗ್ಗೆ ಸಿಎಂ ಏನ್ ಹೇಳಿರುವುದು ಎಂಎಲ್ಎ ಗಳ ಸಂಖ್ಯೆಯು ಮುಖ್ಯ, ಹೈಕಮಾಂಡ್ ಆಶೀರ್ವಾದವೂ ಮುಖ್ಯ ಎಂದಿದ್ದಾರೆ. ಆ ಮಾತನ್ನ ಇಲ್ಲಿ ಪುನರುಚ್ಚರಿಸಿದ್ದೇನೆ. ಹಾಗಂತ ಎಂಎಲ್ಎಗಳ ಸಂಖ್ಯೆಯೇನು ಲೆಕ್ಕಕ್ಕಿಲ್ಲ ಎಂದರೆ ಅದು ಸರಿಯಲ್ಲ ಎಂದು ಡಿಕೆ ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆ ಉತ್ತರ ನೀಡಿದ್ದಾರೆ.

Share This Article