ಉದ್ಯೋಗ ವಾರ್ತೆ | ದೆಹಲಿ ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ. ಅ.13: ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ದೆಹಲಿ ಪೊಲೀಸ್ ಎಕ್ಸಾಮಿನೇಷನ್-2025 ಮೂಲಕ ಹೆಡ್ ಕಾನ್ಸಟೇಬಲ್ (ಅಸಿಸ್ಟೆಂಟ್ ವೈರ್‌ಲೆಸ್ ಆಪರೇಟರ್) (ಟೆಲಿ ಪ್ರಿಂಟರ್ ಆಪರೇಟರ್) ಕಾನ್ಸಟೇಬಲ್ (ಎಕ್ಸಿಟಿವ್)(ಡ್ರೆöÊವರ್) ಹುದ್ದೆಗಳ ನೇಮಕಾತಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

 

ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿಯಲ್ಲಿ ವಿಜ್ಞಾನ ಹಾಗೂ ಗಣಿತ ಅಭ್ಯಾಸ ಮಾಡಿರಬೇಕು. ಡ್ರೆöÊವಿಂಗ್ ಲೈಸೆನ್ಸ್ ಹೊಂದಿರಬೇಕು.

 

18 ರಿಂದ 25 ವರ್ಷಗಳ ಒಳಗಿರಬೇಕು. ಎಸ್.ಸಿ. ಎಸ್.ಟಿ. ಓ.ಬಿ.ಸಿ. ಹಾಗೂ ಈ.ಡಬ್ಲೂö್ಯ.ಎಂ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ. ಡಿಸೆಂಬರ್-2025 ಅಥವಾ ಜನವರಿ-2026ರಲ್ಲಿ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 21 ಕಡೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ  www.ssckkr.kar.nic.in/https://ssc.nic.in     ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 080-25502520 ಕರೆ ಮಾಡಬಹುದು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಂಖ್ಯೆಗಳಾದ 9945587060, 7019755147 ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article