ನೋಟೀಸ್ ನೀಡಿದ್ರು ಸಿಎಂ ಬದಲಾವಣೆ ಬಗ್ಗೆ ಮತ್ತೆ ಧ್ವನಿ ಎತ್ತಿದ ಇಕ್ಬಾಲ್ ಹುಸೇನ್..!

1 Min Read

ಕೊಪ್ಪಳ: ಸಿಎಂ ಬದಲಾವಣೆಯ ವಿಚಾರ ಕಾಂಗ್ರೆಸ್ ಪಕ್ಷದಲ್ಲಿಯೇ ಆಗಾಗ ಚರ್ಚೆಗೆ ಬರ್ತಾ ಇರುತ್ತೆ. ಒಳಗಿನವರೇ ಹೇಳಿಕೆ ನೀಡುವ ಮೂಲಕ ಚರ್ಚೆಯನ್ನ ಹುಟ್ಟು ಹಾಕುತ್ತಾರೆ. ಡಿಕೆಶಿಗೆ ಆಪ್ತರಾಗಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಈ ಹಿಂದೆಯೇ ಒಮ್ಮೆ ಸಿಎಂ ಬದಲಾವಣೆ ವಿಚಾರವನ್ನ ಮಾತನಾಡಿದ್ದರು. ಡಿಕೆ ಶಿವಕುಮಾರ್ ಅವರು ಈ ಅವಧಿಯಲ್ಲಿಯೇ ಸಿಎಂ ಆಗ್ತಾರೆ ಎಂಬ ಮಾತನ್ನ ಹೇಳಿದ್ದರು. ಆಗ ಇಕ್ಬಾಲ್ ಅವರಿಗೆ ನೋಟೀಸ್ ಕೂಡ ಜಾರಿಯಾಗಿತ್ತು. ಇದೀಗ ಮತ್ತೆ ಡಿಕೆಶಿ ನೆಕ್ಸ್ಟ್ ಸಿಎಂ ಎಂಬ ಮಾತನ್ನ ತೆಗೆದಿದ್ದಾರೆ.

ಕೊಪ್ಪಳದಲ್ಲಿ ಮಾತನಾಡುತ್ತಾ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದೆ ನನ್ನ ಅಭಿಲಾಷೆ. ಅವರು ಮುಖ್ಯಮಂತ್ರಿ ಆಗಿಯೇ ಆಗ್ತಾರೆ. ನನ್ನ ಅಭಿಪ್ರಾಯವನ್ನು ಕಾಂಗ್ರೆಸ್ ಹೈಕಮಾಂಡ್ ಗೂ ತಿಳಿಸಿದ್ದೇನೆ. ಕಾಂಗ್ರೆಸ್ ಶಿಸ್ತಿನ ಪಕ್ಷ. ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರುಯಾಂಕಾ ಗಾಂಧಿ ಎಲ್ಲರೂ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ನನ್ನ ಅನಿಸಿಕೆ ಅಭಿಲಾಷೆಯನ್ನು ಹೈಕಮಾಂಡ್ ಬಳಿ ಸ್ಪಷ್ಟವಾಗಿ ಹೇಳಿದ್ದೇನೆ. ಇದಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆಯ ಬಗ್ಗೆಯೇ ಸಾಕಷ್ಟು ಗೊಂದಲವಿದೆ. ಡಿಕೆಶಿ ಬೆಂಬಲಿಗರು ಮುಂದಿನ ಸಿಎಂ ಡಿಕೆ ಶಿವಕುಮಾರ್ ಅಂತ ಕೂಗುತ್ತಾ ಇದ್ರೆ, ಸಿದ್ದರಾಮಯ್ಯ ನಾನೇ ಪೂರ್ಣಾವಧಿ ಸಿಎಂ ಎನ್ನುತ್ತಿದ್ದಾರೆ. ಬದಲಾವಣೆ ನಿಜಕ್ಕೂ ಆಗುತ್ತಾ..? ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರಾ ಎಂಬುದು ನವೆಂಬರ್ ತಿಂಗಳಲ್ಲಿ ತಿಳಿಯಲಿದೆ.

Share This Article